ದಕ್ಷ ಮುಸ್ಲಿಂ ಇನ್ಸಪೆಕ್ಟರ್ ಮೇಲೆ ಹರಿಹಾಯ್ದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ…

ಹುಬ್ಬಳ್ಳಿ: ನಗರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಗಮನದ ನಂತರ ಅವರನ್ನ ಭೇಟಿಯಾಗಲು ಅವಕಾಶ ನೀಡಲಿಲ್ಲವೆಂದುಕೊಂಡು ದಕ್ಷ ಪೊಲೀಸ್ ಇನ್ಸಪೆಕ್ಟರ್ ಮೇಲೆ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹರಿಹಾಯ್ದ ಘಟನೆ ನಡೆದಿದೆ.
ಕಾಂಗ್ರೆಸ್ ಪಕ್ಷದ ಮುಖಂಡರು ನೀಡಿದ ಲಿಸ್ಟನಲ್ಲಿ ಕೋನರೆಡ್ಡಿಯವರ ಹೆಸರು ಇರದೇ ಇರುವುದರಿಂದ ಅವರನ್ನ ಹೊರಗೆ ನಿಲ್ಲಿಸಲಾಗಿತ್ತು. ಇದರ ಅವರ ಕೋಪ ಯಾವ ಮಟ್ಟಕ್ಕೆ ಹೋಗಿತ್ತು ಎಂಬುದಕ್ಕೆ ಈ ವೀಡಿಯೋ ಸಾಕ್ಷಿಯಾಗಿತ್ತು.
ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗೆ ಮಾತನಾಡಿರುವ ರೀತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ದಕ್ಷ ಅಧಿಕಾರಿಗೆ ಹೀಗೆ ಮಾಡಿದ್ದಲ್ಲದೇ ಅಸಹ್ಯವಾಗಿ ವರ್ತನೆ ಮಾಡಿದ್ದು, ಕೋನರೆಡ್ಡಿಯವರ ಬಗ್ಗೆ ಹಲವು ಪ್ರಶ್ನೆಗಳು ಮೂಡುವಂತಾಗಿದೆ.