“ಸಾವಿನ ಮನೆಯಲ್ಲಿ” ಹಂಚು ಕಾಯಿಸಿಕೊಂಡ “ಚೆಂಬು ತ್ರಿಸ್ಟಾರ್”…
1 min readಹುಬ್ಬಳ್ಳಿ: ನಗರದಲ್ಲಿ ಯಾವ್ಯಾವ ಪ್ರಕರಣದಲ್ಲಿ ಏನೇನೂ ಮಾಡಬಹುದು ಎಂದು ತಿಳಿದಿರುವ ಮೂರು ಸ್ಟಾರಿನ ಆಸಾಮಿಯೊಬ್ಬ ಬಡವನ ಹೆಣದ ಮೇಲೆ ಹಣ ಗಳಿಸುವ ಸ್ಕೇಚ್ ರೂಪಿಸಿದ್ದ ಪ್ರಕರಣವೊಂದು ಛೋಟಾ ಬಾಂಬೆಯಲ್ಲಿ ನಡೆದಿದೆಯಂತೆ.
ನಗರದ ಪ್ರಮುಖ ಠಾಣೆಯನ್ನ ಪಡೆಯಲು ವಿಮಾನ ನಿಲ್ದಾಣದ ಮೂಲಕವೇ ಸೈರನ್ ಹಾಕಿದ್ದ ತ್ರಿ ಸ್ಟಾರ್ ಮನುಷ್ಯನೇ, ಮತ್ತೊಬ್ಬ ಅಧಿಕಾರಿಗೆ ಹೆಣದಲ್ಲಿ ರೊಕ್ಕ ಮಾಡುವುದು ಹೇಗೆ ಎಂಬ ಪಾಠ ಮಾಡಲು ಮುಂದಾಗಿದ್ದಾರಂತೆ.
ಊರ್ ಸುಟ್ರು …. ಹೊರಗೆ ಎನ್ನುವಂತೆ ಇರುವ “ಚಸ್ಮಾ ಆರ್ಟಿಐ” ಕೂಡಾ ಇದ್ರಲ್ಲಿ ಡಿಸಿಪಿ ಹೆಸರು ಹೇಳಿಯೂ ಹಣ ಹೊಡೆದಿದ್ದಾರೆಂಬ ಮಾತುಗಳು ಗದಗ ರಸ್ತೆಯುದ್ದಕ್ಕೂ ಕೇಳಿ ಬರುತ್ತಿದೆ.
ದಕ್ಷ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಸಾವಿನ ಮನೆಯಲ್ಲಿ “ಹಂಚು” ಕಾಯಿಸುವ ‘ಚೆಂಬು’ ಗಿರಾಕಿಗಳನ್ನ ಪತ್ತೆ ಹಚ್ಚಿ, ಪಾಠ ಕಲಿಸಬೇಕಿದೆ.