Posts Slider

Karnataka Voice

Latest Kannada News

ಅಮಾನತ್ತಾದ “ವಾರದಲ್ಲೇ ಹಾರ್ಟ್ ಅಟ್ಯಾಕ್” ಇನ್ಸಪೆಕ್ಟರ್ ಸಾವು…

1 min read
Spread the love

ಬೆಂಗಳೂರು: ಕೆ.ಆರ್.ಪುರಂ ಪ್ರದೇಶದಲ್ಲಿ ಪಬ್‌ಗಳ ಸಂಖ್ಯೆ ಹೆಚ್ಚಾಗಿವೆ ಎಂಬ ಕಾರಣಕ್ಕೆ ಅಮಾನತ್ತಾಗಿದ್ದ ಇನ್ಸಪೆಕ್ಟರೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದೆ.

ಬೆಂಗಳೂರು ಪೊಲೀಸ್ ಕಮೀಷನರ್ ಪ್ರತಾಪರೆಡ್ಡಿಯವರಿಂದ ಅಮಾನತ್ತುಗೊಂಡಿದ್ದ ನಂದೀಶ ಎನ್ನುವ ಇನ್ಸಪೆಕ್ಟರ್ ಸಾವಿಗೀಡಾಗಿದ್ದಾರೆ. ತೀವ್ರ ಎದೆ ನೋವಿನಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ತಮ್ಮ ವ್ಯಾಪ್ತಿಯಲ್ಲಿ ಪಬ್‌ಗಳು ಹೆಚ್ಚು ಆಗಿಲ್ಲವೆಂದು ಮತ್ತೂ ತಮಗೆ ಅನ್ಯಾಯ ಆಗಿದೆ ಎಂದು ಇನ್ಸಪೆಕ್ಟರ್ ನಂದೀಶ, ಮಾನಸಿಕವಾಗಿ ಜರ್ಝರಿತಗೊಂಡಿದ್ದರೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *

You may have missed