ವೃಷಸೇನನ ಪಾತ್ರದಲ್ಲಿ ಮಿಂಚಿದ ಹುಬ್ಬಳ್ಳಿಯ ಪೊಲೀಸ್ ಇನ್ಸಪೆಕ್ಟರ್.. Exclusive video

ಹುಬ್ಬಳ್ಳಿ: ಪೋಲಿಸರೆಂದರೆ ತಾವಾಯಿತು ತಮ್ಮ ಕರ್ತವ್ಯ ಆಯಿತು ಎಂದು ಇರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಕರ್ತವ್ಯದ ಜೊತೆಗೆ, ದೊಡ್ಡಾಟ ಪ್ರದರ್ಶನ ಮಾಡಿ ಕೆಲಸದ ಜೊತೆಗೆ ದೇಶದ ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕೂ ಸೈ ಎಂಬುದನ್ನು ತೋರಿಸಿದ್ದಾರೆ.
Exclusive video
ಹೌದು… ಹೀಗೆ ಕೈಯಲ್ಲಿ ಧನಸ್ಸು ಹಿಡಿದು ಎದುರಾಳಿ ಎದೆ ನಡುಗುವಂತೆ ಸಂಭಾಷಣೆ ನಡೆಸಿರುವ ಇವರು ಜೆ.ಎಮ್.ಕಾಲಿಮಿರ್ಚಿ ಅಂತಾ. ಹುಬ್ಬಳ್ಳಿಯ ಗೋಕುಲರಸ್ತೆ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್. ಈಗಾಗಲೇ ತಮ್ಮ ಶಿಸ್ತು ಬದ್ದ ಕಾರ್ಯದಿಂದ ಅಪರಾಧಿಗಳ ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟುವ ಕೆಲಸ ಮಾಡಿದ್ದಾರೆ. ಇದಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕ ಹುಬ್ಬಳ್ಳಿ ಜನರ ಮನೆ ಮನದ ಮಾತಾಗಿದ್ದಾರೆ.
ಇದೀಗ ಇನ್ಸ್ಪೆಕ್ಟರ್ ಜೆ.ಎಮ್.ಕಾಲಿಮಿರ್ಚಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಜಾನಪದ ಕಲಾ ಬಳಗ ಟ್ರಸ್ಟ್ ನಿಂದ ರವಿವಾರ ನಡೆದ ಕರ್ಣಪರ್ವ ದೊಡ್ಡಾಟ ಪ್ರದರ್ಶನದಲ್ಲಿ ವೃಷಸೇನ ಪಾತ್ರದಲ್ಲಿ ವೇಷ ಧರಿಸಿ ಅದ್ಭುತವಾಗಿ ನಟನೆ ಮಾಡುವ ಮೂಲಕ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.