ಹುಬ್ಬಳ್ಳಿಯಲ್ಲಿ ಡ್ಯೂಟಿ ಮಾಡುವಾಗಲೇ ಕುಸಿದು ಬಿದ್ದ ಪೊಲೀಸ್- ಆಸ್ಪತ್ರೆಗೆ ರವಾನೆ..!

ಹುಬ್ಬಳ್ಳಿ: ನಗರದ ಯಲ್ಲಾಪುರ ಓಣಿಯ ಪಾಟೀಲ ಗಲ್ಲಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸರೋರ್ವರು ಕುಸಿದು ಬಿದ್ದ ಪರಿಣಾಮ, ಸ್ಥಳೀಯರು ನೀರು ಹಾಕಿ ಎಚ್ಚರಗೊಳಿಸಿದ್ದು, ಪೊಲೀಸರು ದೌಡಾಯಿಸಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಬೆಂಡಿಗೇರಿ ಪೊಲೀಸ್ ಠಾಣೆಯ ಮಿಸ್ಕಿನ್ ಎಂಬುವವರೇ ತೀವ್ರ ಅನಾರೋಗ್ಯಗೊಂಡಿದ್ದರು, ತಕ್ಷಣವೇ ಅದೇ ಮಾರ್ಗದಲ್ಲಿ ಹೊರಟಿದ್ದ ಘಂಟಿಕೇರಿ ಠಾಣೆಯ ಇನ್ಸಪೆಕ್ಟರ್, ಸ್ಥಳಕ್ಕೆ ಆಗಮಿಸಿ ಅನಾರೋಗ್ಯಗೊಂಡ ಪೊಲೀಸರನ್ನ ಆಸ್ಪತ್ರೆಗೆ ರವಾನೆ ಮಾಡಿದ್ರು.
ಕೆಲವು ತಿಂಗಳ ಹಿಂದಷ್ಟೇ ಆಪರೇಷನ್ ಮಾಡಿಸಿಕೊಂಡಿದ್ದ ಮಿಸ್ಕಿನ್ ಅವರು ಕರ್ತವ್ಯ ನಿರ್ವಹಣೆ ಮಾಡುವುದರಲ್ಲಿ ಮುಂದು. ಹೀಗಾಗಿಯೇ ಲಾಕ್ ಡೌನ್ ಸಮಯದಲ್ಲಿ ನಿರಂತರವಾಗಿ ಕರ್ತವ್ಯದಲ್ಲಿ ತೊಡಗಿದ್ದರು.
ಬೆಳಿಗ್ಗೆಯಿಂದಲೇ ಬಂದೋಬಸ್ತನಲ್ಲಿ ತೊಡಗಿದ್ದ ಪರಿಣಾಮ, ಆಯಾಸದಿಂದ ಹೀಗೆ ಆಗಿರಬಹುದೆಂದು ಹೇಳಲಾಗಿದ್ದು, ಚಿಕಿತ್ಸೆಯನ್ನ ನೀಡಲಾಗುತ್ತಿದೆ.