ಹೂ ಮಾರೋ ಮಹಿಳೆ ಮೇಲೆ ಹುಬ್ಬಳ್ಳಿ ಪೊಲೀಸ್ “ಸ್ಟಾರ್’ ದರ್ಪ…!
1 min readಹುಬ್ಬಳ್ಳಿ: ಕೊರೋನಾ ಹರಡುವುದನ್ನ ತಡೆಗಟ್ಟಲು ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಜೊತೆಗೆ ರಾತ್ರಿ 9 ಗಂಟೆಯಿಂದ ನೈಟ್ ಕರ್ಪ್ಯೂ ಸಹ ವಿಧಿಸಿದೆ. ಆದ್ರೆ, ಟಫ್ ರೂಲ್ಸ್ ಜಾರಿ ಹೆಸರಿನಲ್ಲಿ ಪೊಲೀಸ ಅಧಿಕಾರಿಯೋರ್ವರು ದಾದಾಗಿರಿ ತೋರಿದ ಘಟನೆ ಹುಬ್ಬಳ್ಳಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ನಡೆದಿದೆ.
ದರ್ಪದ ವೀಡಿಯೋ..
ನೈಟ್ ಕರ್ಪ್ಯೂ ಆರಂಭಕ್ಕೂ ಮುನ್ನ ಬೀದಿ ಬದಿ ಹೂವಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರ ಹೂವಿನ ಬುಟ್ಟಿ ಸಮೇತ ಕುರ್ಚಿಯನ್ನ ಪೊಲೀಸರು ಚಿಲ್ಲಾಪಿಲ್ಲಿ ಮಾಡಿ ದರ್ಪ ತೋರಿದ್ದಾರೆ.
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ರಾತ್ರಿ 8:30ರ ಸುಮಾರಿಗೆ ಪೊಲೀಸ ಅಧಿಕಾರಿಯೋಬ್ಬರು ಹೂವು ಮಾರುವ ಮಹಿಳೆಯ ಮೇಲೆ ದರ್ಪ ತೋರಿ ಅಂಗಡಿಯನ್ನ ಚೆಲ್ಲಾಪಿಲ್ಲಿ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ಮುಂಜಾನೆಯಿಂದಲೂ ಹುಬ್ಬಳ್ಳಿ ಧಾರವಾಡ ಪೊಲೀಸರು ಅಗತ್ಯ ವಸ್ತುಗಳ ಅಂಗಡಿಗಳನ್ನ ಹೊರತುಪಡಿಸಿ ಉಳಿದ ಅಂಗಡಿ ಮುಗ್ಗಟ್ಟುಗಳನ್ನ ಬಂದ ಮಾಡಿಸಿದ್ದಕ್ಕೆ ವ್ಯಾಪಾರಸ್ಥರೂ ಸಹ ಆಕ್ರೋಶಗೊಂಡಿದ್ದರು.
ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿ ಎಂದು ಹೇಳಿದರೂ, ಕೈಲಾಗದವರ ಮೇಲೆ ‘ಸ್ಟಾರ್’ ಅಧಿಕಾರಿಯೊಬ್ಬರು ಹೀಗೆ ಮಾಡಿದ್ದು, ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.