ಹುಬ್ಬಳ್ಳಿಯಲ್ಲಿ “ಟಾಸ್” ಗೆದ್ದಿರೋ ಪೊಲೀಸ್ರು ‘ಬ್ಯಾಟಿಂಗ್’ ಆರಂಭಿಸಿದ್ದಾರೆ…!

ಹುಬ್ಬಳ್ಳಿ: ಉಪನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ವೀಕೆಂಡ್ ಕೊರೋನಾ ನಿಯಮ ಉಲ್ಲಂಘನೆ ಮಾಡಿದವರಿಗೆ ಪೊಲೀಸರು ಲಾಠಿಯೇಟು ಕೊಡಲು ಆರಂಭಿಸಿದ್ದು, ಸಂಜೆಯವರೆಗೆ ನಿಯಮ ಪಾಲನೆ ಮಾಡುತ್ತಿದ್ದವರು, ಇಳಿಸಂಜೆ ಆಗುತ್ತಿದ್ದ ಹಾಗೇ ನಿಯಮಗಳನ್ನ ಗಾಳಿಗೆ ತೂರಿದ ಪರಿಣಾಮ ಪೊಲೀಸರು ಹೀಗೆ ನಡೆದುಕೊಳ್ಳುತ್ತಿದ್ದಾರೆ.
ನಿನ್ನೆ ರಾತ್ರಿಯಿಂದಲೇ ಆರಂಭಗೊಂಡಿರುವ ವೀಕೆಂಡ್ ಕರ್ಪ್ಯೂವನ್ನ ನಿಯಮದಂತೆ ಪಾಲನೆ ಮಾಡುತ್ತಿದ್ದ ಸಮಯದಲ್ಲಿ, ಸುಮ್ಮನಿದ್ದ ಪೊಲೀಸರು ತದನಂತರ, ಕೆಲವರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.
ಹಲವು ಬಾರಿ ಹೇಳಿದರೂ, ಪೊಲೀಸರಿಂದ ತಪ್ಪಿಸಿಕೊಳ್ಳಲು ಆರಂಭಿಸಿದ್ದರಿಂದ ಲಾಠಿಯೇಟು ಕೊಟ್ಟು, ನಿಯಮ ಪಾಲನೆ ಮಾಡುವಂತೆ ಪೊಲೀಸರು ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲ, ಕೊರೋನಾ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ದಂಡವನ್ನೂ ಹಾಕಿದ್ದಾರೆಂದು ಹೇಳಲಾಗಿದೆ.