ಖಾಕಿಯಲ್ಲಿ ಖುಷಿ ಮೂಡಿಸಿದ ಫಲಿತಾಂಶ: ಸಾಧನೆಯ ಹಾದಿಯಲ್ಲಿದ್ದವರಿಗೆ ಶುಭ ಹಾರೈಕೆ
ಹುಬ್ಬಳ್ಳಿ: SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹುಬ್ಬಳ್ಳಿ-ಧಾರವಾಡ ಕಮೀಷನರ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಮಕ್ಕಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸನ್ಮಾನಿಸಿದರು.
ಗೋಕುಲ ಠಾಣೆಯ ಸಿಎಚ್ ಸಿ ಎನ್.ಐ.ನೀಲಗಾರ ಅವರ ಪುತ್ರ ಅಬ್ದುಲಸಾಬ ನೀಲಗಾರ 97.92%, ಸಿಎಆರ್ ನ ಎಎಚ್ ಸಿ ಎ.ಬಿ.ತಿಮ್ಮಾಪುರ ಅವರ ಪುತ್ರ ಭುವನಕುಮಾರ 96.96%, ಹುಬ್ಬಳ್ಳಿ-ಧಾರವಾಡ ನಿಸ್ತಂತು ಕೇಂದ್ರದಲ್ಲಿನ ಎಎಸ್ ಐ ವ್ಹಿ.ಆರ್.ನಾಯಕರ ಪುತ್ರಿ ಸ್ನೇಹಾ ನಾಯಕ 94.56%, ಧಾರವಾಡ ಸಂಚಾರಿ ಠಾಣೆಯ ಸಿಎಚ್ ಸಿ ಜಿ.ಟಿ.ಕರಿಗಾರ ಪುತ್ರ ವಿನಾಯಕ ಕರಿಗಾರ 93.76%, ಧಾರವಾಡ ವಿದ್ಯಾಗಿರಿ ಠಾಣೆಯ ಸಿಎಚ್ ಸಿ ಪಿ.ಎ.ಮಾಣೆ ಅವರ ಪುತ್ರ ಶಂಶಾಕ ಮಾಣೆ 92.80% ಹಾಗೂ ಹುಬ್ಬಳ್ಳಿ ಉಪನಗರ ಠಾಣೆಯ ಪಿಎಸೈ ಅಶೋಕ ಅವರ ಪುತ್ರಿ ವೈಷ್ಣವಿ 91% ಅಂಕ ಪಡೆದಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳನ್ನ DCP ಗಳಾದ ಪಿ.ಕೃಷ್ಣಕಾಂತ, ಆರ್.ಬಿ. ಬಸರಗಿ, ಸಿಎಆರ್ ಡಿಸಿಪಿ ಶ್ರೀನಿವಾಸ ಯಾದವ, ಎಸಿಪಿಗಳಾದ ಎಸ್.ಎಂ.ರಾಗಿ, ಎಂ.ವಿ.ಮಲ್ಲಾಪುರ, ಜಿ.ಅನುಷಾ ಸೇರಿದಂತೆ ಹಲವು ಠಾಣೆಗಳು ಇನ್ಸಪೆಕ್ಟರುಗಳು ಹಾಜರಿದ್ದು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು.