ಹುಬ್ಬಳ್ಳಿ ‘ಪೊಲೀಸ್’ ಕುಟುಂಬದ ನೆಮ್ಮದಿ ಹಾಳು….!
1 min readಹುಬ್ಬಳ್ಳಿ: ನಗರದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಕುಟುಂಬಗಳು ರಾತ್ರಿಯಾದರೇ ಸಾಕು, ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಕಾರಣವಾಗಿದ್ದು ಹಾವುಗಳ ನಿರಂತರ ಕಾಟ.
ಹೌದು.. ಚಾಣಕ್ಯಪುರಿಯಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ಹಾವುಗಳು ನಿರಂತರವಾಗಿ ಬರುತ್ತಿದ್ದು, ಜನರ ನೆಮ್ಮದಿ ಕಾಪಾಡುತ್ತಿರುವ ಪೊಲೀಸರ ಕುಟುಂಬಗಳಿಗೆ ಮಾತ್ರ ನೆಮ್ಮದಿಯಿಲ್ಲವಾಗಿದೆ.
ಇಂದು ಕೂಡಾ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನ ಸಿಸಿಬಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಕಾನ್ಸಟೇಬಲ್ ಸಂತೋಷ ಇಚ್ಚಂಗಿಯವರ ಮನೆಯಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿ, ರಾತ್ರಿಯ ನಿದ್ದೆಯನ್ನ ಹಾಳು ಮಾಡಿದಂತಾಗಿದೆ.
ಮನೆಯ ಮುಂದೆ ಬಂದ ನಾಗರ ಹಾವಿನ ಬಗ್ಗೆ ಸ್ನೇಕ ಶಿವು ಎಂಬುವವರಿಗೆ ತಿಳಿಸಿದ ತಕ್ಷಣವೇ ಸ್ಥಳಕ್ಕೆ ಬಂದ ಸ್ನೇಕ ಶಿವು, ಹಾವನ್ನ ಹಿಡಿದು, ಕಾಡಿನತ್ತ ಹೋಗಿ ಬಿಟ್ಟು ಬಂದರು.
ಚಿಕ್ಕ ಮಕ್ಕಳನ್ನ ಮನೆಯಲ್ಲಿ ಬಿಟ್ಟು ಕರ್ತವ್ಯಕ್ಕೆ ಹೋಗುವ ಪೊಲೀಸರ ವಸತಿ ಗೃಹಗಳ ಸುತ್ತಲೂ ಕಂಪೌಂಡ ಇಲ್ಲದೇ ಇರುವುದು ಕೂಡಾ, ಇಂತಹ ಸರಿಸೃಪಗಳು ಬರುತ್ತಿರುವುದಕ್ಕೆ ಕಾರಣವಾಗಿದೆ.
ಜನರ ಪರವಾಗಿಯೂ, ಸಾರ್ವಜನಿಕರ ನೆಮ್ಮದಿಗಾಗಿಯೂ ಹಗಲಿರುಳು ಶ್ರಮಿಸುವ ಪೊಲೀಸರ ಕುಟುಂಬಕ್ಕೆ ನೆಮ್ಮದಿಯನ್ನ ಕೊಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಬೇಕಿದೆಯಲ್ಲವೇ…!