ಹುಬ್ಬಳ್ಳಿಯಲ್ಲಿ ಪೊಲೀಸ್ ಮೇಲೆ ಹಲ್ಲೆ-ನಾಲ್ವರ ಬಂಧನ…!
1 min readಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಲಾಕ್ ಡೌನ್ ವೇಳೆ ಮುಗಿದ ಬೆನ್ನಲ್ಲೇ ಕಿರಾಣಿ ಅಂಗಡಿಯನ್ನ ಬಂದ್ ಮಾಡಲು ಹೋದ ಸಮಯದಲ್ಲಿ ಪೊಲೀಸರೊಬ್ಬರ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಮಾತ್ರ ಅಂಗಡಿಗಳನ್ನ ತೆಗೆಯಬೇಕೆಂಬ ನಿಯಮವಿದ್ದರೂ ಕೂಡಾ, ಅದನ್ನ ಮೀರಿ ಅಂಗಡಿ ತೆಗೆದಿದ್ದ ಈರಣ್ಣ ಹನುಮಸಾಗರ ಎಂಬಾತರಿಗೆ ಪೊಲೀಸ್ ಗಿರೀಶ ತಿಪ್ಪಣ್ಣನವರ, ಬಂದ್ ಮಾಡುವಂತೆ ಹೇಳಲು ಹೋಗಿದ್ದಾರೆ. ಇದೇ ಸಮಯದಲ್ಲಿ ಮಂಜುನಾಥ ಕಿರಾಣಿ ಅಂಗಡಿ ಮಾಲೀಕ ಈರಣ್ಣ ಹನುಮಸಾಗರ ಮತ್ತು ಆತನ ಮೂವರು ಮಕ್ಕಳು ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಲ್ಲದೇ ಹಲ್ಲೆ ಮಾಡಿರುವ ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ದಾಖಲು ಮಾಡಿಕೊಂಡು, ನಾಲ್ವರನ್ನ ಬಂಧನ ಮಾಡಿದ್ದಾರೆ.
ಪೊಲೀಸರು ಯಾರ್ ಸಲುವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆಂಬ ಸಾಮಾನ್ಯ ಜ್ಞಾನವೂ ಇಲ್ಲದ ಹಾಗೇ ನಡೆದುಕೊಂಡವರಿಗೆ ತಕ್ಕ ಶಿಕ್ಷೆಯಾಗಬೇಕಿದೆಯಲ್ಲವೇ..!?