“ಕುಡುಕ ಮಗನ ಹಾವಳಿ” ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ “ತಂದೆಯ ಜೀವ” ಉಳಿಸಿದ ಹುಬ್ಬಳ್ಳಿ ಪೊಲೀಸರು….

ಹುಬ್ಬಳ್ಳಿ: ಜೀವನದ ಸಂಧ್ಯಾಕಾಲದಲ್ಲಿ ಪುತ್ರನ ಕಿರಿಕಿರಿ ತಾಳದೇ ಆತ್ಮಹತ್ಯೆ ಮಾಡಿಕೊಳ್ಳಲು ಮನೆ ಬಿಟ್ಟು ಹೋಗಿದ್ದ ವೃದ್ಧ ತಂದೆಯನ್ನ ಕೆಲವೇ ಗಂಟೆಗಳಲ್ಲಿ ಪೊಲೀಸರು ಪತ್ತೆ ಹಚ್ಚಿ ಮನೆಗೆ ತಂದಿರುವ ಅಪರೂಪದ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಕೇಶ್ವಾಪುರದ ನಿವಾಸಿ ಕೃಷ್ಣ ಶಾನಭಾಗ ಎಂಬ ವೃದ್ಧರೇ ಮನೆ ಬಿಟ್ಟು ಹೋಗಿದ್ದರು. ಈ ಬಗ್ಗೆ ಗೊತ್ತಾದ ತಕ್ಷಣವೇ ಕೇಶ್ವಾಪುರ ಠಾಣೆಯ ಪಿಎಸ್ಐ ಸದಾಶಿವ ಕಾನಟ್ಟಿ ಹಾಗೂ ಎಎಸ್ಐ ತಮ್ಮಾಜಿರಾವ ತಲವಾಯಿ ಕಾರ್ಯಪ್ರವೃತ್ತರಾಗಿದ್ದಾರೆ.
ವೃದ್ಧ ಕೃಷ್ಣಾ ಶಾನಭಾಗ ಅವರು ಬಂಕಾಪುರದಲ್ಲಿ ಪೊಲೀಸರ ಕೈಗೆ ಸಿಕ್ಕಿದ್ದಾರೆ. ಆತ್ಮಹತ್ಯೆಯ ಮಾತುಗಳನ್ನಾಡುತ್ತಿದ್ದ ಕೃಷ್ಣಾ ಅವರಿಗೆ ಮನವೊಲಿಸಿ ಕರೆದುಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ಮಗನಿಗೆ ಬುದ್ಧಿವಾದ ಹೇಳಿ ತಂದೆಯನ್ನ ಸರಿಯಾಗಿ ನೋಡಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಪೊಲೀಸರ ಈ ಕಾರ್ಯ ಶ್ಲಾಘನೀಯವಾಗಿದೆ.