ಹೊರಟ್ಟಿಯವರ ಮನೆ ಪಕ್ಕ ಕಳ್ಳತನ ಪ್ರಕರಣ- ಇಬ್ಬರು ಆರೋಪಿಗಳಿಗೆ “ಫೈರಿಂಗ್”- Exclusive

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಬೆಳ್ಳಂ ಬೆಳಿಗ್ಗೆ ಪೊಲೀಸರ ಗನ್ ಸದ್ದು ಮಾಡಿದ್ದು, ಮನೆ ದರೋಡೆ ಮಾಡಿದ್ದ ಇಬ್ಬರು ದರೋಡೆಕೋರರು ಆಸ್ಪತ್ರೆ ಪಾಲಾಗಿದ್ದಾರೆ.
ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಭಾಪತಿ ಬಸವರಾಜ್ ಹೊರಟ್ಟಿಯವರ ಮನೆಯ ಪಕ್ಕದಲ್ಲಿನ ನಿವಾಸದಲ್ಲಿ ದರೋಡೆ ಮಾಡಿದ್ದ ದರೋಡೆಕೋರರು.
ದರೋಡೆಕೋರರ ವೀಡಿಯೋ…
ಆರೋಪಿಗಳನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರಿಂದ, ಆತ್ಮರಕ್ಷಣೆಗಾಗಿ ದರೋಡೆಕೋರರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಇನ್ಸ್‌ಪೆಕ್ಟರ್ ಎಂ. ಎಸ್. ಹೂಗಾರ್ ಹಾಗೂ PSI ದೇವೇಂದ್ರ ಅವರಿಂದ ಪೈರಿಂಗ್ ನಡೆದಿದ್ದು, ಹೆಚ್ಚಿನ ವಿವರವನ್ನ ನಿರೀಕ್ಷಿಸಲಾಗುತ್ತಿದೆ.