ಸಾಮಾಜಿಕ ಅಂತರ ಮರೆತ ಪೊಲೀಸರನ್ನೂ ಬಿಡದ ಇನ್ಸಪೆಕ್ಟರ್ ರವಿಚಂದ್ರ…!

ಹುಬ್ಬಳ್ಳಿ: ಕಾನೂನು ಎಲ್ಲರಿಗೂ ಒಂದೇ. ಅದನ್ನ ಯಾರೇ ಮುರಿದರೂ ಅವರ ವಿರುದ್ಧ ಪೊಲೀಸ್ ಕ್ರಮ ಸಿದ್ಧವೆನ್ನುವುದು ಹುಬ್ಬಳ್ಳಿಯಲ್ಲಿ ರೂಢಿಯಾಗಿದೆ. ಅದೇ ಕಾರಣಕ್ಕೆ ಸಾಮಾಜಿಕ ಅಂತರ ಮರೆತು, ಪೊಲೀಸ್ ವಾಹನದಲ್ಲಿ ಬಂದ ಪೊಲೀಸರಿಗೇನೆ ದಂಡ ವಿಧಿಸಿದ ಅಪರೂಪದ ಘಟನೆ ಚೆನ್ನಮ್ಮ ವೃತ್ತದಲ್ಲಿ ನಡೆಯಿತು.
ದಂಡ ಹಾಕಿರೋ ವೀಡಿಯೋ..
ಹುಬ್ಬಳ್ಳಿಯ ಉಪನಗರ ಠಾಣೆ ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ ಅವರು ಬಂದೋಬಸ್ತ್ ನಡೆಸುತ್ತಿದ್ದ ವೇಳೆಯಲ್ಲಿ ಬೇರೆ ಜಿಲ್ಲೆಯಿಂದ ಬಂದ ಪೊಲೀಸ್ ವಾಹನದಲ್ಲಿ ಸಾಮಾಜಿಕ ಅಂತರ ಮರೆತು ಹೆಚ್ಚು ಪೊಲೀಸರು ಕುಳಿತಿದ್ದರು. ಇದನ್ನ ನೋಡಿದ ತಕ್ಷಣವೇ, ಪೊಲೀಸ್ ವಾಹನಕ್ಕೆ ದಂಡವನ್ನ ತುಂಬುವಂತೆ ಸೂಚನೆ ನೀಡಿದರು.
ಇನ್ಸಪೆಕ್ಟರ್ ಸೂಚನೆ ಮೇರೆ ಪೊಲೀಸರು, ಪೊಲೀಸರ ವಾಹನಕ್ಕೆ 250 ರೂಪಾಯಿ ದಂಡ ವಿಧಿಸಿ, ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನ ಸಾಬೀತು ಮಾಡಿದ್ರು.