ಹುಬ್ಬಳ್ಳಿಯಿಂದ ಹೊರಟಿದ್ದ ವಾಹನದಲ್ಲಿ 56ಲಕ್ಷ ಪತ್ತೆ: ಡಸ್ಟರ್ ಕಾರು ಸಮೇತ ಇಬ್ಬರ ಬಂಧನ

ಶಿರಸಿ: ಯಾವುದೇ ದಾಖಲೆಗಳಿಲ್ಲದೇ ಡಸ್ಟರ್ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ 56ಲಕ್ಷ ರೂಪಾಯಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು, ಹಣ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ ಇಬ್ಬರನ್ನ ಬಂಧನ ಮಾಡಲಾಗಿದೆ.
ಹುಬ್ಬಳ್ಳಿಯಿಂದ ಮಂಗಳೂರಿಗೆ ಹೊರಟಿದ್ದವರನ್ನ ಚಿಪಗಿ ಗ್ರಾಮದ ಬಳಿಯ ಚೆಕ್ ಪೋಸ್ಟ್ ಮೂಲಕ ಡಸ್ಟರ್ ವಾಹನ ಸಂಖ್ಯೆ ಕೆಎ-31 ಎನ್-2628 ನಲ್ಲಿ ಸಿದ್ಧಾಪುರ ತಾಲೂಕಿನ ಹೆರೂರು ಗ್ರಾಮದ ಅಬ್ದುಲ ಮತ್ತು ಮುತಲೀಫ್ ಎಂಬಾತರು ಹಣವನ್ನ ಸಾಗಿಸುತ್ತಿದ್ದರು. ಅಡಿಕೆ ವ್ಯಾಪಾರಿಗಳೆಂದು ಹೇಳಿಕೊಂಡಿರುವ ಇವರ ಬಗ್ಗೆ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ.
ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಶಾಂತ, ಕೊಟ್ರೇಶ, ಚಂದ್ರಪ್ಪ, ರಾಜೇಶ ನಾಯ್ಕ ಮತ್ತು ವೀರೇಶ ಭಾಗಿಯಾಗಿದ್ದರು.