‘ಯೂನಿಫಾರ್ಮ್ನಲ್ಲೇ’ ಕುಡಿದು ಕರ್ತವ್ಯ: ಕಳ್ಳರಂತೆ ಓಡಿ ಹೋದ ಪೊಲೀಸರು…!
1 min readತುಮಕೂರು: ಸಾರ್ವಜನಿಕ ಸ್ಥಳದಲ್ಲಿ ಪೊಲೀಸರು ಹೇಗೆ ಇರಬೇಕು ಹೇಗೆ ಇರಬಾರದು ಎನ್ನುವುದಕ್ಕೆ ಇದೀಗ ವೈರಲ್ ಆಗಿರುವ ವೀಡಿಯೋಂದು ಉತ್ತರ ನೀಡುತ್ತಿದೆ. ಕರ್ತವ್ಯ ನಿರ್ವಹಣೆ ವೇಳೆಯಲ್ಲಿ ಆರಕ್ಷಕರು ಹೇಗಿರಬೇಕು ಎಂಬುದನ್ನ ಇದನ್ನ ನೋಡಿಯಾದರೂ ತಿಳಿದುಕೊಳ್ಳುವ ಅವಶ್ಯಕತೆಯಿದೆ.
ಸಮವಸ್ತ್ರದಲ್ಲಿದ್ದ ಪೊಲೀಸರು ಹೊಯ್ಸಳ ವಾಹನದಲ್ಲಿ ಕುಡಿದು ಪ್ಯಾಕೇಟ್ ಗಳನ್ನ ಒಗೆಯುವುದನ್ನ ನೋಡಿದ ಸಾರ್ವಜನಿಕರು, ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡ ಘಟನೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ಜನರಿಗೆ ಉತ್ತರ ಕೊಡದೇ ಪೊಲೀಸರೇ ಕತ್ತಲಿನಲ್ಲಿ ಓಡಿ ಹೋದ ಪ್ರಸಂಗವೂ ನಡೆದಿರುವುದು ಉತ್ತಮವಾಗಿ ಕಾರ್ಯನಿರ್ವಹಿಸುವ ಪೊಲೀಸರಿಗೂ ಇರಿಸುಮುರುಸುಂಟು ಮಾಡಿದೆ. ಕರ್ತವ್ಯದಲ್ಲಿ ಅದೂ ಸಮವಸ್ತ್ರದಲ್ಲಿದ್ದಾಗ, ಹೀಗೆ ಮಾಡದೇ ಇರುವುದು ಒಳಿತು. ಇಲ್ಲಿದಿದ್ದರೇ ಮೂರು ಕಾಸಿಗೆ ಮಾನ ಹರಾಜಾಗುವುದು ಗ್ಯಾರಂಟಿ ಎಂಬುದನ್ನ ಇದನ್ನ ನೋಡಿಯಾದರೂ ಅರಿತುಕೊಳ್ಳಬೇಕಿದೆ.