ಧಾರವಾಡದಲ್ಲಿ ಲಾಠಿಯೇಟು… ಎಸಿಪಿ ಅನುಷಾ ಅವರೇ ಹೊಡೆಯಬಾರದೆಂದು ಆದೇಶ ಮಾಡಿದ್ರೀ ಅಲ್ವಾ…!?

ಧಾರವಾಡ: ಲಾಕ್ ಡೌನ್ ನಿಯಮ ಮೀರಿದವರ ವಿರುದ್ಧ ಯಾರೇ ಸಿಬ್ಬಂದಿಗಳು ಬೇರೆ ಯಾವುದೇ ಥರದ ಕ್ರಮಗಳನ್ನ ತೆಗೆದುಕೊಳ್ಳಬಾರದು. ಕೇವಲ ಕಾನೂನು ಕ್ರಮವನ್ನ ಜರುಗಿಸಬೇಕೆಂದು ಎಸಿಪಿ ಅನುಷಾ ಅವರು ಆರ್ಡರ್ ಮಾಡಿ, ಇನ್ನೂ ಆರೇಳು ದಿನ ಆಗಿಲ್ಲಾ ಅಷ್ಟರಲ್ಲೇ ಅವರದ್ದೆ ಅಧಿಕಾರಿಯೋರ್ವರು ಲಾಠಿಯೇಟು ಹಾಕಿರುವುದು ಬೆಳಕಿಗೆ ಬಂದಿದೆ.
ಬೆಳಗಿನ ನಿಗದಿತ ಸಮಯದಲ್ಲಿ ಅಂಗಡಿ ಮುಗ್ಗಟ್ಟುಗಳನ್ನ ಮುಚ್ಚದಿದ್ದ ಹೂವು ಅಂಗಡಿಯವರಿಗೆ ಲಾಠಿಯಿಂದ ಹೊಡೆದ ಘಟನೆ ಸಂಭವಿಸಿದೆ. ಇದು ಕಾನೂನು ಪಾಲನೆ ಅಂತೀರಾ. ಎಸಿಪಿ ಅನುಷಾ ಅವರು ಉತ್ತರಿಸಬೇಕಿದೆ. ಕಳೆದ ಕೆಲವು ದಿನಗಳ ಹಿಂದೆ ಸಂಚಾರಿ ಠಾಣೆಯ ಅಧಿಕಾರಿಯೋರ್ವರು ಕಾನೂನು ಉಲ್ಲಂಘನೆ ಮಾಡಿದ ಯುವಕನಿಗೆ ಬಸ್ಕಿ ಹೊಡಿಸಿದ್ದರು. ಅದೇ ದಿನ, ಎಸಿಪಿ ಅನುಷಾ ಅವರು, ಯಾವುದೇ ಸಿಬ್ಬಂದಿ ಇಂತಹದಕ್ಕೆ ಮುಂದಾಗಬಾರದು. ಹೊಡೆಯಬಾರದು. ಇದು ಕಮೀಷನರ್ ಸ್ಟ್ರೀಕ್ ಆರ್ಡರ್ ಎಂದಿದ್ದರು.
ಎಸಿಪಿ ಅನುಷಾ ಅವರೇ, ವೀಡಿಯೋ ಕೂಡಾ ಇದೆ. ನೋಡಿ, ನೀವು ಹೇಳಿದ್ದನ್ನ ನಿಮ್ಮದೇ ಸಿಬ್ಬಂದಿಗಳು ಪಾಲನೆ ಮಾಡುತ್ತಿಲ್ಲ. ನೀವೂ ಹೇಳಿದ ಹಾಗೇ ಅದೇನು ಕ್ರಮ ಜರುಗಿಸುತ್ತಿರೋ ಕಾದು ನೋಡೋಣ.
ಹುಬ್ಬಳ್ಳಿಯ ಕೇಶ್ವಾಪುರ ವೃತ್ತದಲ್ಲಿ ಎಸಿಪಿ ವಿನೋದ ಮುಕ್ತೆದಾರ ಜೊತೆ ಮಹಿಳೆಯೋರ್ವರು ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ಮಹಿಳೆಯ ಸ್ಕೂಟಿಯನ್ನ ಹಿಡಿದು ಬೇರೆಯವರ ಬೈಕುಗಳನ್ನ ಬಿಡುತ್ತಿರುವುದಕ್ಕೆ ರೋಸಿ ಹೋದ ಮಹಿಳೆ, ಐದಾರೂ ಕಿಲೋಮೀಟರ್ ನಡೆದುಕೊಂಡು ಬರುವುದು ಹೇಗೆ ಎಂದು ಪ್ರಶ್ನಿಸಿದರಾದರೂ, ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿರಲಿಲ್ಲ..