ಪೊಲೀಸ್ ಪತಿ ಆತ್ಮಹತ್ಯೆ- ಮಹಿಳಾ ಪೇದೆಯೂ ಬಾವಿಯಲ್ಲಿ ಶವವಾಗಿ ಪತ್ತೆ…!
ಕಲಬುರಗಿ: ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದವರು ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಕುಟುಂಬದೊಂದಿಗೆ ಕ್ಷೇಮವಾಗಿದ್ದ ಮಹಿಳಾ ಪೇದೆಯ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳು ಮೂಡತೊಡಗಿವೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದಲ್ಲಿ ಮಹಿಳಾ ಪೇದೆ ಸುರೇಖಾಳ ಶವ ಪತ್ತೆಯಾಗಿದ್ದು, ಈಕೆಯ ಪತಿ ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಹಿಳಾ ಪೇದೆಯ ಶವ ಇಂದು ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದ್ದು, ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರಾ, ಅಥವಾ ಯಾರಾದರೂ ಕೊಲೆ ಮಾಡಿ ಹಾಕಿದ್ದಾರಾ ಎಂಬ ಸಂಶಯ ಮೂಡಿದೆ.
ಬಾವಿಯಲ್ಲಿ ತಲೆ ಬುಡವಾಗಿ ಹೆಣ ಸಿಕ್ಕಿದ್ದು, ಅದಕ್ಕೆ ಕೆಳಗಡೆ ಹೋಗುವಂತೆ ಕಲ್ಲುಗಳನ್ನ ಕಟ್ಟಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದ ಬಗ್ಗೆ ಹಬ್ಬಿರುವ ಊಹಾಪೋಹಗಳನ್ನೂ ಪೊಲೀಸರು ತನಿಖೆ ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆ ರಿಸಲ್ಟ್ ಬಂದ ನಂತರ ಮತ್ತಷ್ಟು ಮಾಹಿತಿ ಲಭಿಸಲಿದೆ.
                      
                      
                      
                      
                      
                        