“ಯಾರೂ ತಿಳಿಯರು ನನ್ನ ಭುಜ ಬಲದ ಪರಾಕ್ರಮ”- ಚೆನ್ನಮ್ಮ ವೃತ್ತದಲ್ಲಿ ದೇಶ ಕಾಯುವ-ಊರು ಕಾಯುವವರ ನಡುವೆ…!

ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದಿಂದ ಗದಗ ಜಿಲ್ಲೆ ಹುಲಕೋಟಿಗೆ ಹೊರಟಿದ್ದ ಯೋಧನೊಬ್ಬ ಪೊಲೀಸರೊಂದಿಗೆ ‘ಹಾಕ್ಯಾಟ’ಕ್ಕೀಳಿದ ಘಟನೆ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಸಿಆರ್ ಪಿ ಎಫ್ ಯೋಧ ಮಂಜುನಾಥ ನಾಯ್ಕರ ಎಂಬುವವರ ಹಾಗೂ ಉಪನಗರ ಠಾಣೆ ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ ನಡುವೆ ನಡೆದ ಝಲಕ್ ಇಲ್ಲಿದೆ ನೋಡಿ..
ನಗರದ ಚೆನ್ನಮ್ಮ ವೃತ್ತದಲ್ಲಿ ವಾಹನ ತಪಾಸಣೆ ಮಾಡುತ್ತಿರುವ ವೇಳೆ CRPF ಯೋಧನ ವಾಹನದಲ್ಲಿ ಮಾಸ್ಕ ಹಾಕಿಕೊಳ್ಳದೆ ಸಂಚರಿಸುತ್ತಿದ್ದನ್ನು ಗಮನಿಸಿದ ಪೊಲೀಸರು ದಂಡ ಕಟ್ಟುವಂತೆ ಹೇಳಿದ್ದಾರೆ. ಯೋಧ ನಾವು ಮಾಸ್ಕ ಹಾಕಿಕೊಂಡಿದ್ದೇವೆ, ನೀವು ಸುಳ್ಳು ಹೇಳುತ್ತಿದ್ದಿರಿ ಎಂದು ಪೊಲೀಸರ ಜೊತೆ ವಾಗ್ವಾದಕ್ಕೀಳಿದಿದ್ದಾರೆ.
ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು,ಕಾರನ್ನ ಸೀಜ್ ಮಾಡಲು ಸ್ವತಃ ಇನ್ಸ್ ಪೆಕ್ಟರ್ ರವಿಚಂದ್ರ ಮುಂದಾದಾಗ, ಯೋಧ ಮಂಜುನಾಥ ನಾಯ್ಕರ ತೀರಾ ಬೇರೆಯದ್ದೇ ಥರದಲ್ಲಿ ನಡೆದುಕೊಂಡಿದ್ದಾರೆ. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಇಷ್ಟೇಲ್ಲಾ ಹೈಡ್ರಾಮಾ ಮುಗಿದ ಮೇಲೆ, ಪೊಲೀಸರು ಮಾತ್ರ ದಂಡ ಹಾಕಿಯೇ ಕಾರನ್ನ ಬಿಟ್ಟು ಕಳಿಸಿದ ಘಟನೆ ನಡೆಯಿತು.