ಧಾರವಾಡದ ಗಿರಿನಗರದಿಂದ ಪೊಲೀಸ್ ಕಂಟ್ರೋಲ್ ರೂಂ ಗೆ ಕಾಲ್…!

ಧಾರವಾಡ: ಇಂದು ಬೆಳ್ಳಂಬೆಳಿಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಅಪರೂಪದ ಕಾಲ್ ಬಂದಿತ್ತು. ಇಂತಹ ದೂರವಾಣಿಗಳು ಕರೆಗಳು ಬರುವುದು ಯಾವತ್ತೋ ಒಂದೀನಾ ಮಾತ್ರ. ಹಾಗಾಗಿಯೇ, ಇಂದು ಪೊಲೀಸರು ಅಪರೂಪದ ಗಳಿಗೆಯನ್ನ ಉತ್ತಮವಾಗಿ ನಿಭಾಯಿಸಿದರು.

ಇಂದು ಗಿರಿನಗರದಿಂದ ಕಂಟ್ರೋಲ್ ರೂಂ ಗೆ ಬಂದ್ ಕಾಲ್ “ ಸರ್, ದಯವಿಟ್ಟು ಯಾರನ್ನಾದರೂ ಕಳಿಸಿ. ಇಲ್ಲೊಂದು ಜಿಂಕೆಯನ್ನ ನಾಯಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಹೇಗಾದರೂ ಮಾಡಿ, ಕಾಪಾಡಿ.. ಸರ್” ಎನ್ನುತ್ತಲೇ ಪೋನ್ ಕಟ್ ಆಗಿತ್ತು.
ತಕ್ಷಣವೇ ಜಾಗೃತರಾದ ಪೊಲೀಸರು, ಚಾಲುಕ್ಯ 13ನ್ನ ಸ್ಥಳಕ್ಕೆ ಕಳಿಸಿ, ಜಿಂಕೆಯನ್ನ ರಕ್ಷಣೆಯನ್ನ ಮಾಡಿದ್ದಲ್ಲದೇ, ಅರಣ್ಯ ಇಲಾಖೆಯ ಸುಪರ್ಧಿಗೆ ಒಪ್ಪಿಸಲಾಗಿದೆ. ಪೊಲೀಸರ ಈ ಕಾರ್ಯ ಸಾರ್ವಜನಿಕರಲ್ಲಿ ಮೆಚ್ಚುಗೆಯನ್ನ ವ್ಯಕ್ತಪಡಿಸುವಂತೆ ಮಾಡಿದೆ.