“ರೌಡಿ ಅಕ್ಬರ ಹತ್ಯೆ” 6ಆರೋಪಿಗಳ ಬಂಧನ- ತನಿಖೆ ಮುಂದುವರೆದಿದೆ: ಪೊಲೀಸ್ ಕಮೀಷನರ್ ಲಾಬುರಾಮ್ ಹೇಳಿದ್ದೇನು ಗೊತ್ತಾ…

ಹುಬ್ಬಳ್ಳಿ: ರೌಡಿ ಷೀಟರ್ ನ್ನ ಕೊಲೆ ಮಾಡಿ ಪೊಲೀಸರಿಗೆ ಸರಂಡರ್ ಆದರೆ ಕೇಸ್ ಮುಗಿದೇ ಹೋಗತ್ತೆ ಅನ್ನೋರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದ್ದು, ದುರುಳರನ್ನ ಜೈಲಿಗಟ್ಟುತ್ತಿದ್ದಾರೆ.
ಹುಬ್ಬಳ್ಳಿಯ ರೌಡಿ ಷೀಟರ್ ಅಕ್ಬರ ಮುಲ್ಲಾ ಎಂಬಾತನನ್ನ ಅರವಿಂದನಗರದಲ್ಲಿ ಕೊಚ್ಚಿ ಕೊಲೆ ಮಾಡಿದ್ದು ನಾನೊಬ್ಬನೇ ಎಂದು ಪೊಲೀಸರಿಗೆ ಸರಂಡರ್ ಆಗಿದ್ದ ಸದಾನಂದ ಬುರ್ಲಿಯ ನಾಟಕವನ್ನ ಬೇಧಿಸುವಲ್ಲಿ ಪೊಲೀಸ್ ಕಮೀಷನರ್ ಪಡೆ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಸ್ವತಃ ಪೊಲೀಸ್ ಕಮೀಷನರ್ ಲಾಬುರಾಮ್ ಮಾತಾಡಿದ್ದಾರೆ ಕೇಳಿ…
ಈಗಾಗಲೇ ಆರು ಆರೋಪಿಗಳನ್ನ ಬಂಧನ ಮಾಡಲಾಗಿದೆಯಾದರೂ ತನಿಖೆ ಮುಂದುವರೆದಿದೆ ಎನ್ನುವ ಮೂಲಕ ಈ ಪ್ರಕರಣದ ಹಿಂದಿರುವ ರಕ್ಕಸರನ್ನ ಹಿಡಿಯಲು ಪೊಲೀಸರು ಹೊಂಚು ಹಾಕಿದ್ದಾರೆನ್ನುವುದು ಗೊತ್ತಾಗತ್ತೆ.
ಈ ಪ್ರಕರಣ ಮೂಲಕ ಪೊಲೀಸರನ್ನೇ ಯಾಮಾರಿಸುವ ದುಷ್ಟ ಕೂಟಕ್ಕೆ ಪೊಲೀಸ್ ಕಮೀಷನರ್ ಚಳ್ಳೆಹಣ್ಣು ತಿನ್ನಿಸುವ ಮೂಲಕ, ಆರೋಪಿಗಳಿಗೆ ಚೆಕ್ ನೀಡಿರುವುದಂತೂ ಸತ್ಯ.