ಶ್ರೀನಿವಾಸ್ ಬೆಳದಡಿ ಗಂಡ್ಸ್ ಅಲ್ಲ್ ಅಂವಾ- ಹೆಂಗ್ಸರ್ ಮ್ಯಾಲ್ ಕೈ ಮಾಡ್ಯಾನ್: ಹುಬ್ಬಳ್ಳಿ ಪೊಲೀಸ್ ಕಮೀಷನರ್ ಕಚೇರಿ ಮುಂದೆ ನಡೆದದ್ದಾರೂ ಏನು…!?

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ಪಕ್ಷೇತರ ಅಭ್ಯರ್ಥಿಯಿಂದ ಸೋತ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಬೆಳದಡಿ ಮತ್ತು ಬೆಂಬಲಿಗರು ನಡೆಸಿದ ಹಲ್ಲೆ ಪ್ರಕರಣ ಬೇರೆಯದ್ದೆ ಸ್ವರೂಪ ಪಡೆದಿದ್ದು, ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿ ಗೃಹ ಸಚಿವರ ಭೇಟಿ ಮಾಡಲು ಹಲ್ಲೆಗೊಳಗಾದ ಕುಟುಂಬ ಮತ್ತು ಬೆಂಬಲಿಗರು ಯತ್ನಿಸಿದ ಘಟನೆ ನಡೆಯಿತು.
ಈ ಸಮಯದಲ್ಲಿ ರೋಸಿ ಹೋದ ಮಹಿಳೆಯೋರ್ವಳು, ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಲ್ಲದೇ, ಕಾಂಗ್ರೆಸ್ ಅಭ್ಯರ್ಥಿಯ ಪತಿಯನ್ನ ತರಾಟೆಗೆ ತೆಗೆದುಕೊಂಡರು.
ಪೂರ್ಣ ವೀಡಿಯೋ ನೋಡಿ….
ಹಲ್ಲೆ ನಡೆದು 48 ಗಂಟೆಗಳು ಆಗುತ್ತಾ ಬಂದರೂ ಪೊಲೀಸರು ಆರೋಪಿಗಳ ಬಂಧನ ಮಾಡಿಲ್ಲ. ಹೀಗಾಗಿ ಹೋರಾಟ ಮುಂದುವರೆದಿದೆ.