ಶ್…!!! New Year ಮೂಡ್‌ಲ್ಲಿ ಇದ್ದೀರಾ..? ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಏನ್ ಹೇಳಿದ್ದಾರೆ ಕೇಳಿ…
1 min readಹುಬ್ಬಳ್ಳಿ: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಅದರಂತೆ ವಿದ್ಯಾಕಾಶಿ ಧಾರವಾಡ ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲು ಯುವಜನರು ಉತ್ಸುಕರಾಗಿದ್ದಾರೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಯಾವುದೇ ದುರ್ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಹೀಗಾಗಿ ಹು-ಧಾ ಅವಳಿನಗರದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಲಾಬೂರಾಮ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗುತ್ತದೆ. ಇಂದು ನಗರದಾದ್ಯಂತ ಪೊಲೀಸ್ ಸರ್ಪಗಾವಲು ಇರುತ್ತದೆ. ಇಂದು ಎಲ್ಲ ತರಹದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೆಲವು ಸಂಘ ಸಂಸ್ಥೆಗಳು ಹೊಸ ವರ್ಷದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ. ಅವರಿಗೆ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ತಿಳಿಸಿದ್ದೇವೆ ಎಂದರು.
ಇಂದು ರಾತ್ರಿ 9 ಗಂಟೆ ನಂತರ ಹು-ಧಾ ಪೋಲಿಸ್ ಕಮಿಷ್ನರೇಟ್ ಸಿಬ್ಬಂದಿಗಳು ಇಡೀ ರಾತ್ರಿ ಪೆಟ್ರೋಲಿಂಗ್ ಮಾಡತ್ತಾರೆ. ಇದಲ್ಲದೇ ಹೊರಗಡೆಯಿಂದ ಏಳು ಕೆಎಸ್ ಆರ್’ಪಿ, 10 ಸಿ.ಆರ್.ತುಕಡಿಗಳನ್ನು ನೇಮಕ ಮಾಡಲಾಗಿದೆ. ಕೆಲವು ಪ್ರಮುಖ ರಸ್ತೆಗಳಾದ ಟೆಂಡರ್ ಶ್ಯೂರ್ ರಸ್ತೆ, ಗೋಕುಲರಸ್ತೆ, ಬೈಪಾರಿ ಸೇರಿದಂತೆ ಮುಂತಾದ ಕಡೆಗಳಲ್ಲಿ ರಾತ್ರಿ 12 ಗಂಟೆ ವೇಳೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದೆ. ಸುಖಾಸುಮ್ಮನೆ ಹುಡುಗರು ಬೈಕ್ ವಿಲಿಂಗ್ ಮಾಡುವುದನ್ನು ತಡೆಯಲು ಬ್ಯಾರಿಕೇಡ್ ಹಾಕಲು ತಿಳಿಸಲಾಗಿದೆ. ಒಟ್ಟಾರೆ ಹು-ಧಾ ದಲ್ಲಿ ಶಾಂತಿಯುತವಾಗಿ ಹೊಸ ವರ್ಷ ಆಚರಣೆಗೆ ಏನೇನೂ ಬಂದೋಬಸ್ತ ಅವಶ್ಯಕತೆ ಇದೆ ಅದನ್ನು ಮಾಡಲಾಗಿದೆ ಎಂದು ಹೇಳದರು.
ಯಾರು ನಿಮಯ ಬಾಹಿರವಾಗಿ ನಡೆದುಕೊಳ್ಳತ್ತಾರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.ಜೊತೆಗೆ ಯಾರು ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಅವರಿಗೆ ಕೂಡಾ ನಿರ್ದೇಶನ ನೀಡಲಾಗಿದೆ. ಹೊಸ ವರ್ಷವನ್ನು ಎಲ್ಲರೂ ಶಾಂತಿಯಿಂದ ಖುಷಿಯಿಂದ ಆಚರಣೆ ಮಾಡಬೇಕು ಎಂದು ಲಾಬೂರಾಮ್ ತಿಳಿಸಿದರು.