ಇಲಾಖೆಯ ಗೌರವ ಹೆಚ್ಚಿಸಿದ “ಕಮೀಷನರ್ ಲಾಬುರಾಮ್” ವರ್ಗಾವಣೆ…

ಬೆಂಗಳೂರು: ರಾಜ್ಯ ಸರಕಾರ ನಾಲ್ಕು ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರನ್ನೂ ವರ್ಗಾವಣೆ ಮಾಡಲಾಗಿದೆ.
ಅವಳಿನಗರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ, ಇಲಾಖೆಯಲ್ಲಿನ ಹಲವು ತೊಂದರೆಗಳ ನಡುವೆ ಅಧಿಕಾರ ವಹಿಸಿಕೊಂಡಿದ್ದ ಲಾಬುರಾಮ್ ಅವರು, ಅವಳಿನಗರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು.
ಇಲಾಖೆಯಲ್ಲಿನ ಭ್ರಷ್ಟಾಚಾರ ಕಡಿಮೆ ಮಾಡುವ ಜೊತೆಗೆ ಸಾರ್ವಜನಿಕರ ಅಧಿಕಾರಿಯಾಗಿದ್ದ ಕಮೀಷನರ್ ಲಾಬುರಾಮ್ ಅವರ ವರ್ಗಾವಣೆ, ಹಲವರಿಗೆ ತೀವ್ರ ನೋವನ್ನುಂಟು ಮಾಡಿದೆ.