ನೂತನ ಕಮೀಷನರ್ “ರಮಣ ಗುಪ್ತಾ”ರ ಬಗ್ಗೆ ನಿಮಗೆ ಗೊತ್ತಾಗಬೇಕಾ….!?
1 min readಹುಬ್ಬಳ್ಳಿ: ದಕ್ಷ ಅಧಿಕಾರಿಯಾಗಿದ್ದ ಲಾಬುರಾಮ್ ಅವರು ವರ್ಗಾವಣೆಗೊಂಡ ಸ್ಥಳಕ್ಕೆ ಬಂದಿರುವ ನೂತನ ಕಮೀಷನರ್ ರಮಣ ಗುಪ್ತಾ ಅವರ ಬಗ್ಗೆ ತಿಳಿಸುವ ಮಾಹಿತಿ ಇಲ್ಲಿದೆ ನೋಡಿ.
ರಮಣ ಗುಪ್ತಾ ಅವರು ಜೂನ್ 11. 1980ರಲ್ಲಿ ಹರಿಯಾಣದಲ್ಲಿ ಜನಿಸಿದ್ದಾರೆ. 2005 ರಲ್ಲಿ ಐಪಿಎಸ್ ಆಗಿ ಆಯ್ಕೆಯಾಗಿದ್ದಾರೆ. M.I.B (Master of International Business) ಅತ್ಯುತ್ತಮ ಶಿಕ್ಷಣ ಪಡೆದುಕೊಂಡಿದ್ದಾರೆ.
ಕೇಂದ್ರದಿಂದ ರಾಜ್ಯದ ಜಾರಿ ನಿರ್ದೇಶನಾಲಯಕ್ಕೆ ಜಂಟಿ ನಿರ್ದೇಶಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ರಮಣಗುಪ್ತಾ ಅವರು ನಂತರ ಪದನ್ನೋತಿ ಹೊಂದಿ ಬೆಂಗಳೂರು ಕ್ರೈಂ ವಿಭಾಗದ ಜಂಟಿ ಕಮೀಷನರ್ ಆಗಿದ್ದರು. ತದನಂತರ ಮತ್ತೆ ಪ್ರಮೋಷನ್ ಹೊಂದಿ ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ವರ್ಗಾವಣೆಯಾಗಿದ್ದರಾದರೂ, ಅದೇ ಸಮಯದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ವರ್ಗಾವಣೆ ಆದೇಶ ಬಂದ ದಿನವೇ ಕಮೀಷನರ್ ಆಗಿ ರಮಣ ಗುಪ್ತಾ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬೆಂಗಳೂರು ಸಿಸಿಬಿಯಲ್ಲಿ ‘ಝಂಡಾ’ ಊರಿದ್ದ ಹಲವರ ದಿಕ್ಕನ್ನ ಬದಲಿಸಿ, ಅದಕ್ಕೊಂದು ಹೊಸ ಹುರುಪು ನೀಡಿದ ರಮಣ ಗುಪ್ತಾ ಅವರು, ಭ್ರಷ್ಟಾಚಾರ ರಹಿತ ಆಡಳಿತ ನಡೆಸಿಕೊಂಡು ಹೋಗುವುದರಲ್ಲಿ ಮುಂಚೂಣಿಯಲ್ಲಿದ್ದಾರೆ.
ಹಾಸನ, ಶಿವಮೊಗ್ಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿಯೂ ರಮಣ ಗುಪ್ತಾ ಅವರು ಸೇವೆ ಸಲ್ಲಿಸಿದ್ದಾರೆ.