ಹುಬ್ಬಳ್ಳಿಯಲ್ಲಿ “264- ದಂಡಂ ದಶಗುಣಂ”- IPS ಶಶಿಕುಮಾರ ಹೊಸ ವರಸೆ…!!!

ಹುಬ್ಬಳ್ಳಿ: ಅವಳಿ ನಗರದಲ್ಲಿ ಕ್ರೈಂ ರೇಟ್ ತಡೆಗಟ್ಟುವ ನಿಟ್ಟಿನಲ್ಲಿ ಕಮಿಷನರ್ ಎನ್. ಶಶಿಕುಮಾರ್ ಖುದ್ದು ಬೈಕ್‌ನಲ್ಲಿ ಕಾರ್ಯಾಚರಣೆ ನಡೆಸಿ, ದಾಖಲೆಗಳಿಲ್ಲದ ಹಾಗೂ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 264 ಬೈಕ್‌ಗಳನ್ನು ಸೀಜ್ ಮಾಡಿದ್ದಾರೆ.
ಅವಳಿನಗರದಲ್ಲಿ ಅಪರಾಧ ಕೃತ್ಯ ನಡೆಸಲು, ನಂಬರ್ ಪ್ಲೇಟ್ ಇಲ್ಲದ ಹಾಗೂ ಕದ್ದ ಬೈಕ್ ಗಳನ್ನು ಉಪಯೋಗ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇಂತಹ ಕಾರ್ಯಾಚರಣೆ ನಡೆಸಲಾಯಿತು.
ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…
ದಕ್ಷಿಣ ಉಪವಿಭಾಗದಲ್ಲಿ 14 ಕಡೆ ಚೆಕ್ ಪೋಸ್ಟ್ ಹಾಕಿ ವಾಹನಗಳನ್ನು ಪರಿಶೀಲನೆ ನಡೆಸಿ 264 ವಾಹನಗಳನ್ನು ಸೀಜ್ ಮಾಡಲಾಗಿದೆ. ಸವಾರರು ವಾಹನದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಒಂದು ವೇಳೆ ದಾಖಲೆಗಳು ಇಲ್ಲದೇ ಹೋದಲ್ಲಿ ಅಂತಹ ವಾಹನಗಳನ್ನು ಸೀಜ್ ಮಾಡಿ ವಾಹನದ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಿ, ವಾಹನಗಳನ್ನು ಕೋರ್ಟ್ ಮೂಲಕ ಬಿಡಿಸಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.