ಧಾರವಾಡದಲ್ಲಿ ಪೊಲೀಸರಿಗೆ ಗೂಸಾ: ಬಿಜೆಪಿ ಮುಖಂಡನ ಕಟ್ಟಡದ ಮುಂದೆ ಘಟನೆ- ಪೊಲೀಸರು ಆಸ್ಪತ್ರೆಗೆ
1 min readಧಾರವಾಡ: ಭಾರತೀಯ ಜನತಾ ಪಕ್ಷದ ಮುಖಂಡರ ಮಾಲಿಕತ್ವದ ಕಟ್ಟಡದ ಮುಂಭಾಗವೇ ಪೊಲೀಸರ ಮೇಲೆ ಇರಾಣಿ ಗ್ಯಾಂಗ್ ದಾಳಿ ಮಾಡಿದ್ದು, ನಾಲ್ವರು ಪೊಲೀಸರು ಗಾಯಗೊಂಡ ಘಟನೆ ಸಂಗಮ ವೃತ್ತದ ಬಳಿ ಸಂಭವಿಸಿದೆ.
ಹಲ್ಲೆಯ ಎಕ್ಸಕ್ಲೂಸಿವ್ ದೃಶ್ಯಗಳು
https://www.youtube.com/watch?v=Jtk8YznAeLU
ವಿಜಯಾನಂದ ಶೆಟ್ಟಿ ಮಾಲೀಕತ್ವದ ಕಟ್ಟಡದ ಮುಂಭಾಗದಲ್ಲಿರುವ ಜೈನ್ ಇಲೆಕ್ಟ್ರೀಕ್ ಬಳಿ ಘಟನೆ ನಡೆದಿದ್ದು, ಆಂದ್ರ ಮೂಲದ ನಾಲ್ಕು ಪೊಲೀಸರು ಜಾಫರ್ ಇರಾಣಿ ಕಡೆಯವರನ್ನ ಹಿಡಿದು ನಿಲ್ಲಿಸಿದ್ದರು. ಆಗ, ಇರಾಣಿ ಗ್ಯಾಂಗಿನವರು ದಾಳಿ ಮಾಡಿ, ಪೊಲೀಸರನ್ನೇ ಮನ ಬಂದಂತೆ ಥಳಿಸಿದ್ದಾರೆ. ಇದರಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ.
ಘಟನೆ ತೀವ್ರ ಸ್ವರೂಪ ಪಡೆಯುತ್ತಿದಂತೆ ಸ್ಥಳೀಯ ಶಹರ ಠಾಣೆಯ ಪೊಲೀಸರು ಬಂದ ತಕ್ಷಣವೇ ಕೆಲವರು ಪರಾರಿಯಾಗಿದ್ದು, ಓರ್ವನನ್ನ ಬಂಧನ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಜಾಫರ್ ಇರಾಣಿಯ ಮಕ್ಕಳನ್ನ ಬಂಧಿಸಲು ಬಂದಿದ್ದವರ ಮೇಲೆ ಹಲ್ಲೆ ನಡೆದಿದ್ದು, ಸಂಗಮ ವೃತ್ತದಲ್ಲಿ ಗೊಂದಲ ಸೃಷ್ಟಿಯಾಗಿದೆ.
ಶಹರ ಠಾಣೆಯ ಪೊಲೀಸರು, ಆಂದ್ರ ಮೂಲದ ಪೊಲೀಸರ ಮೇಲೆ ಹಲ್ಲೆ ನಡೆಸಿದವರನ್ನ ಹುಡುಕುವ ಪ್ರಯತ್ನಕ್ಕೆ ಇಳಿದಿದ್ದು, ಸಿಕ್ಕಿರುವ ಒಬ್ಬಾತನಿಂದ ಮಾಹಿತಿಯನ್ನ ಸಂಗ್ರಹ ಮಾಡುತ್ತಿದ್ದಾರೆ.