ಧಾರವಾಡ: ಪೊಲೀಸಪ್ಪನಿಗೆ ಬಾಟಲಿಯೇಟು… ನಾಲ್ವರು ಅಂದರ್- “ಅರಣ್ಯರೋಧನ”….!!!

ಧಾರವಾಡ: ಸುಮ್ಮನೆ ಕೂಡಲಾರದೇ ಇರುವೆ ಬಿಟ್ಟುಕೊಂಡ ಪೊಲೀಸನೋರ್ವನಿಗೆ ಸೋಡಾ ಬಾಟಲಿಯಿಂದ ಹೊಡೆದ ಪ್ರಕರಣವೊಂದು ಅರಣ್ಯರೋಧನವಾಗುತ್ತಿದ್ದನ್ನ ಹಿರಿಯ ಅಧಿಕಾರಿಯೋರ್ವ ಪತ್ತೆ ಹಚ್ಚಿ ನಾಲ್ವರನ್ನ ಅಂದರ್ ಮಾಡಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಹೌದು… ಮೂರ್ನಾಲ್ಕು ದಿನಗಳ ಹಿಂದೆ ನಡೆದಿದ್ದ ಪ್ರಕರಣ, ಅದೇ ಠಾಣೆಯ ಇನ್ಸಪೆಕ್ಟರ್ ಅವರಿಗೆ ಗೊತ್ತಾಗಿದೆ. ದಕ್ಷ ಅಧಿಕಾರಿ ತಕ್ಷಣವೇ ನಡೆದ ಅರಣ್ಯದ ಮಾಲೀಕನಿಂದ ದೂರು ಪಡೆದು ನಾಲ್ವರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.

ಅರಣ್ಯದಲ್ಲಿ ಆರಕ್ಷನಿಗೇನಿತ್ತು ಕೆಲಸ ಎಂದು ಪ್ರಶ್ನಿಸಬೇಡಿ. ಅನ್ಯಾಯ ನಡೆದ ಜಾಗದಲ್ಲಿ ಕೆಲವರು ಮಹಾಭಾರತದ ಅರ್ಜುನನ ಹಾಗೇ ಪ್ರತ್ಯಕ್ಷವಾಗಿ, ಅನ್ಯಾಯದ ವಿರುದ್ಧ ನಿಲ್ಲುತ್ತಾರೆ. ವ್ಯಾಪ್ತಿ ಅವರದ್ದಲ್ಲವಾದರೂ “ನ್ಯಾಯ” ಮುಖ್ಯ ಅಲ್ಲವೇ…