Posts Slider

Karnataka Voice

Latest Kannada News

“ಕಳ್ಳರ ಕಳ್ಳ ಪೊಲೀಸ್ ಅರೆಸ್ಟ್”- ಮನೆ ಹುಡುಕಿ “ಚೋರರಿಗೆ ಚಿತ್ತ”…

1 min read
Spread the love

ಅಪರಾಧ ಪ್ರಕರಣಗಳನ್ನು ಭೇದಿಸಿ ಅಪರಾಧಿಗಳನ್ನು ಹಿಡಿದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೋಲಿಸರ ಪಾತ್ರ ಬಹಳ ದೊಡ್ಡದಾಗಿದೆ. ಆದ್ರೆ, ಇಲ್ಲೋರ್ವ ಪೊಲೀಸ್ ದರೋಡೆಕೋರರನ್ನು ಹಿಡಿಯುವ ಬದಲಿಗೆ ಅವರ ಜೊತೆಯಲ್ಲೇ ಸೇರಿಕೊಂಡು ಕಳ್ಳತನಕ್ಕೆ ಇಳಿದಿದ್ದಾನೆ. ಈಗಾಗಲೇ ಎರಡು ಪ್ರಕರಣದಲ್ಲಿ ಸಿಲುಕಿ ಅಮಾನತ್ತುಗೊಂಡಿರುವ ಕಾನ್ಸ್​ಟೇಬಲ್ ಈಗ ಮೂರನೇ ಕಳ್ಳತನ ಕೇಸ್​ನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು: ದರೋಡೆಕೋರರನ್ನು ಹಿಡಿಯಬೇಕಾದವರೇ ಕಳ್ಳರ ಜೊತೆ ಸೇರಿ ಮನೆಕಳ್ಳತನ ಮಾಡುತ್ತಿದ್ದ ಪೊಲೀಸ್ ಕಾನ್ಸ್​ಟೇಬಲ್ ಅರೆಸ್ಟ್ ಆಗಿದ್ದಾನೆ.

ಹೌದು….ಬೇಲಿಯೇ ಎದ್ದು ಹೊಲ ಮೇಯ್ದಂತೆ, ಕಳ್ಳರನ್ನು ಹಿಡಿದು ಶಿಕ್ಷೆಗೊಳಪಡಿಸುವ ಪೊಲೀಸ್ ಕಳ್ಳರ ಜೊತೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಪೊಲೀಸ್​ ಕಾನ್ಸ್​​ಟೇಬಲ್​​ ಯಲ್ಲಪ್ಪ ಎನ್ನುವಾತನ್ನನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಒಂದಲ್ಲ ಎರಡಲ್ಲ ಒಟ್ಟು ಮೂರು ಮನೆಗಳ್ಳತನ ಪ್ರಕರಣದಲ್ಲಿ ಪೊಲೀಸ್​ ಕಾನ್ಸ್​​ಟೇಬಲ್​​ ಯಲ್ಲಪ್ಪ ಭಾಗಿಯಾಗಿದ್ದ. ಈ ಹಿಂದೆ ಚಂದ್ರಾಲೇಔಟ್, ಚಿಕ್ಕ ಜಾಲ, ಬನಶಂಕರಿ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆರೋಪದ ಮೇಲೆ ಯಲ್ಲಪ್ಪನನ್ನ ಅಮಾನತು ಮಾಡಿ ತನಿಖೆಗೆ ಅದೇಶ ಹೊರಡಿಸಲಾಗಿತ್ತು. ಆದರೂ ತನ್ನ ಹಳೆ ಚಾಳಿಯನ್ನ ಬಿಡದ ಯಲ್ಲಪ್ಪ, ತನ್ನ ಕೈಚಳಕ ಮುಂದುವರೆಸಿ ಇದೀಗ ಲಾಕ್​ ಆಗಿದ್ದಾನೆ.

ಚಂದ್ರಾಲೇಔಟ್, ಚಿಕ್ಕ ಜಾಲದಲ್ಲೂ ಕೈ ಚಳಕ ತೋರಿಸಿದ್ದ ಯಲ್ಲಪ್ಪ. ಈ ಹಿಂದೆ ಕೂಡ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಅಗ ಬನಶಂಕರಿ ಠಾಣೆಯ ಕ್ರೈಂ ವಿಭಾಗದ ಕಾನ್ಸ್ ಟೇಬಲ್ ಅಗಿದ್ದ. ಕಳ್ಳತನ ಆರೋಪಿಗಳ ವಿಚಾರಣೆ ವೇಳೆ ಕಾನ್ಸ್​ಟೇಬಲ್​ ಯಲ್ಲಪನ ಪಾತ್ರದ ಬಗ್ಗೆ ಬಾಯ್ಬಿಟ್ಟಿದ್ದರು. ಬಳಿಕ ತನಿಖೆ ನಡೆಸಿದ್ದ ಪೊಲೀಸರು ಪ್ರಾಥಮಿಕ ಹಂತದಲ್ಲಿ ಯಲಪ್ಪನ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಯಲ್ಲಪ್ಪನನ್ನು ಅಮಾನತು ಮಾಡಲಾಗಿತ್ತು.

ಇನ್ನು ಕಳ್ಳತನ ಮಾಡಿದ್ದ ವಸ್ತುಗಳ ರಿಕವರಿಗಾಗಿ ಯಲ್ಲಪ್ಪನನ್ನು ಆತನ ಊರಿಗೆ ಕರೆದುಕೊಂಡು ಹೋದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಊರಿಗೆ ಮಾತ್ರ ಕರೆದುಕೊಂಡು ಹೋಗಬೇಡಿ ಎಂದು ಪಟ್ಟು ಹಿಡಿದಿದ್ದ ಎಂದು ತಿಳಿದುಬಂದಿದೆ.


Spread the love

Leave a Reply

Your email address will not be published. Required fields are marked *