ಗಳಗಿ ಹುಲಕೊಪ್ಪದಲ್ಲಿ ಅಂದರ್-ಬಾಹರ್: 4ಬಂಧನ, 9ಜನ ಪರಾರಿ…!

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಶಿವಾಜಿ ಸರ್ಕಲ್ ಬಳಿಯ ಖುಲ್ಲಾ ಜಾಗದಲ್ಲಿ ಅಂದರ್-ಬಾಹರ್ ಆಡುತ್ತಿದ್ದ ತಂಡದ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನ ಬಂಧನ ಮಾಡಿದ್ದು, 9 ಜನರು ಪರಾರಿಯಾಗಿದ್ದಾರೆ.

ಬಂಧಿತರನ್ನ ಈರಣ್ಣ ಬಸಪ್ಪ ಹುಬ್ಬಳ್ಳಿ, ಅಲ್ಲಾಭಕ್ಷ್ಯ ಮಾಬುಸಾಬ ಹೂಗಾರ, ಶಿವಾಜಿ ಗಂಗಪ್ಪ ಜಾಧವ ಹಾಗೂ ನಾಗಪ್ಪ ಬಸಪ್ಪ ಹೂಗಾರ ಎಂದು ಗುರುತಿಸಲಾಗಿದ್ದು, ಪರಾರಿಯಾದವರನ್ನ ಶಂಕರ ಜಾಧವ, ವಿಠ್ಠಲ ಮಟ್ಟಿ, ಸುರೇಶ ಕಲಾಲ, ವಸಂತ ಬಂಗೋಳಿ, ಕರೆಪ್ಪ ಅಂಚಟಗೇರಿ, ಹನಮಂತ ರೇವಡ್ಯಾಳ, ದಯಾನಂದ ಜಾಧವ, ಹನಮಂತ ದುಬ್ಬದಮರಡಿ ಎಂದು ಪತ್ತೆ ಹಚ್ಚಲಾಗಿದೆ.
ಬಂಧಿತ ಜೂಜುಕೋರರಿಂದ 6300 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಕಲಘಟಗಿ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.