ಪ್ಲಾಸ್ಮಾ ದಾನ ಜಾಗೃತಿ: ಇತ್ತೇಹಾದ್-ಹಬೀಬ ಫೌಂಡೇಶನ ಸಹಯೋಗ

ಧಾರವಾಡ: ಕೋವಿಡ್ ನಿಂದ ಗುಣಮುಖರಾದವರು ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಿ ಜೀವ ರಕ್ಷಿಸಬಹುದು. ಪ್ಲಾಸ್ಮಾ ದಾನಿಗಳಿಗೆ ಸರ್ಕಾರ ತಲಾ 5 ಸಾವಿರ ರೂ.ಪ್ರೋತ್ಸಾಹ ಧನ ನೀಡುತ್ತಿದೆ . ಪ್ಲಾಸ್ಮಾ ದಾನಕ್ಕೆ ಕೋವಿಡ್ ನಿಂದ ಗುಣಮುಖರಾದವರು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹೇಳಿದರು.
ಧಾರವಾಡ ಡಿಸ್ಟ್ರಿಕ್ಟ್ ಸೆಂಟರ್ ಫಾರ್ ಲರ್ನಿಂಗ್ ಮತ್ತು ಇನ್ನೋವೇಷನ್ ಕೋವಿಡ್ ಸೇಫ್ಟಿ ಸೊಲುಷನ್ಸ್ ( DDCLIS) , ಇತ್ತೇಹಾದ್ ಗ್ರೂಪ್ ಹಾಗೂ ಹಬೀಬ್ ಫೌಂಡೇಷನ್ ಸಹಯೋಗದಲ್ಲಿ ಮಾಳಾಪುರದ ಪಠಾಣ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ಕುರಿತು ಇರುವ ತಪ್ಪು ಸಾಮಾಜಿಕ ಕಲ್ಪನೆಗಳು ದೂರವಾಗಬೇಕು.ರೋಗದ ವಿರುದ್ಧ ನಮ್ಮ ಹೋರಾಟ ಇರಬೇಕು, ರೋಗಿಯ ವಿರುದ್ಧ ಅಲ್ಲ ಎಂದರು.
ಜಿಲ್ಲೆಯಲ್ಲಿ ಪ್ಲಾಸ್ಮಾ ದಾನ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಡಾ.ಉಮೇಶ್ ಹಳ್ಳಿಕೇರಿ ಮಾತನಾಡಿ, ಪ್ಲಾಸ್ಮಾ ದಾನದಿಂದ ಇತರ ರೋಗಿಗಳ ಜೀಚ ರಕ್ಷಣೆ ಸಾಧ್ಯವಿದೆ. ಅದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದರು.ಸಭೆಯಲ್ಲಿ ಉಪಸ್ಥಿತರಿದ್ದ ಜನರೊಂದಿಗೆ ಸಂವಾದ ನಡೆಸಿ ಅವರ ಸಂದೇಹಗಳಿಗೆ ಉತ್ತರಿಸಿದರು. ಕಿಮ್ಸ್ ಪ್ಲಾಸ್ಮಾ ದಾನ ಸಹಾಯವಾಣಿ 94487331304,827780062 ಸಂಪರ್ಕಿಸಲು ಕೋರಿದರು.
ಜಿಲ್ಲೆಯ ಮೊದಲ ಪ್ಲಾಸ್ಮಾ ದಾನಿ ಮೊಹಮ್ಮದ್ ಯೂಸುಫ್ ಗಾಂಜೆವಾಲೆ ಕೋವಿಡ್ ಯೋಧರನ್ನು ಇತ್ತೆಹಾದ್ ಗ್ರೂಪ್ ಜೊತೆಗೆ ಗಣ್ಯರು ಸನ್ಮಾನಿಸಿದರು.
ಅಂಜುಮನ್ ಜಿಲ್ಲಾಧ್ಯಕ್ಷ ಅಬ್ದುಲ್ ಹಮೀದ್ ಕೊಪ್ಪದ್, ಇಮ್ರಾನ ಕಳ್ಳಿಮನಿ, ಮುಖಂಡರಾದ ಮುಫ್ತಿ ಮಹ್ಮದ್, ಡಾ.ವಿಜಾಪುರ, ಒಟ್ಟಿಲಿ ಅನ್ಬನ್ ಕುಮಾರ, ವಕೀಲ ಮುಸಖಾನ್ ಪಠಾಣ್ , ಜುಬೇರ್ , ಹುಸೇನ್ ದರ್ಗಾದ, ಜಮೀಲ್ ಮುಲ್ಲಾ, ವಸೀಮ್ ಕಿತ್ತೂರ್, ಜಾವೇದ್ ಪೀರಜಾದೆ, ತಾರಿಕ್ ಪಠಾಣ್, ಜಹೀರ್ ಪೀರಜಾದೆ ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು