ಪ್ರಭು ಸೂರಿನ್ ಕಲಘಟಗಿ, ಶ್ರೀಧರ ಸತಾರೆ ಧಾರವಾಡ ಗ್ರಾಮೀಣ: 68ಇನ್ಸಪೆಕ್ಟರುಗಳ ವರ್ಗಾವಣೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ 68 ಇನ್ಸಪೆಕ್ಟರುಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿ ಧಾರವಾಡದ ಎರಡು ಇನ್ಸಪೆಕ್ಟರುಗಳು ವರ್ಗಾವಣೆಯಾಗಿದ್ದಾರೆ.
ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿದ್ದ ಶ್ರೀಧರ ಸತಾರೆ ಅವರನ್ನ ಮೇಲ್ದರ್ಜೆಗೇರಿರುವ ಧಾರವಾಡ ಗ್ರಾಮೀಣ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ನವನಗರ ಎಪಿಎಂಸಿ ಠಾಣೆ ಇನ್ಸಪೆಕ್ಟರ್ ಪ್ರಭು ಸೂರಿನ್ ಅವರನ್ನ ಕಲಘಟಗಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ನವನಗರದ ವಕೀಲ ವಿನೋದ ಪಾಟೀಲ ಪ್ರಕರಣದಲ್ಲಿ ವಿವಾದಕ್ಕೀಡಾಗಿದ್ದ ಇನ್ಸಪೆಕ್ಟರ್ ಪ್ರಭು ಸೂರಿನ್ ಮತ್ತೆ ಎಪಿಎಂಸಿ ಠಾಣೆಗೆ ಬರದಂತಾಗಿದ್ದು, ಕಲಘಟಗಿ ಠಾಣೆಗೆ ಹೋಗುವಂತಾಗಿದೆ.