Posts Slider

Karnataka Voice

Latest Kannada News

ಪಿಸ್ತೂಲ್ ತೋರಿಸಿ ಹಣ ದೋಚಿದ್ದ ಕಲಘಟಗಿಯವನ ಬಂಧನ..!

Spread the love

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ಮಲ್ಲಿಕಾ ಹೊಟೇಲ್ ಬಳಿ‌ ಬೈಕ್ ನಲ್ಲಿ ಬರುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ ಮೂವರು ಆರೋಪಿಗಳನ್ನ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಕಲಘಟಗಿಯ ಮೌಲಾಲಿ ತಂದೆ ಮಹ್ಮದ ಸಾಬ ( 34 ), ಸಾಗರದ ಮಹ್ಮದ ಆಸೀಪ್  ಮಹ್ಮದ ಇಲಿಯಾಸ್ (37) ಮತ್ತು ಅತಾವುಲ್ಲಾ  ಇಸ್ಮಾಯಿಲ್‍ಸಾಬ ಮಕಾಂದರ (36) ಬಂಧಿತ ಆರೋಪಿಗಳಾಗಿದ್ದಾರೆ.

ಫೆಬ್ರುವರಿ  08 ರಂದು ರಾತ್ರಿ 10-45ರ  ಸುಮಾರಿಗೆ  ಹಾವೇರಿಯ ಕೃಷ್ಣಾಜಿ ಎಂಬುವವರು  ತಮ್ಮ‌ಬೈಕ್ನಲ್ಲಿ ಆಕಾಶ ಹಾಗೂ ತಮ್ಮ ಹೇಮಂತ ಇವರೊಂದಿಗೆ ತೆರಳುತ್ತಿದ್ದಾಗ ಅಡ್ಡಗಟ್ಟಿ   ಪಿಸ್ತೂಲ್ ಮತ್ತು ರಾಡ್ ಹಿಡಿದುಕೊಂಡು ಪಿರ್ಯಾದಿಯವರಿಗೆ ಹೊಡೆಯಲು ಮೈಮೇಲೆ ಏರಿ ಬಂದು ಅವರಿಗೆ ಹಲ್ಲೆ ಮಾಡಿದ್ದರಲ್ಕದೇ,  820 ರೂಪಾಯಿ ನಗದು,  ಕೊರಳಲ್ಲಿದ್ದ ಬೆಳ್ಳಿಯ ಚೈನ್‍ನ್ನು ಹಾಗೂ  ಹಿರೋ ಹೊಂಡಾ ಬೈಕನ್ನ ದರೋಡೆ ಮಾಡಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರು.

ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ಆರೋಪಿಯನ್ನ ಬಂಧಿಸಲು ಯಶಸ್ವಿಯಾಗಿದ್ದಾರೆ. ಪ್ರಕರಣವನ್ನ ಎಸ್ಪಿ ಶಿವಪ್ರಕಾಶ ದೇವರಾಜು  ಅಡಿಷನಲ್ ಎಸ್ಪಿ ಬದರಿನಾಥ ಎಸ್, ಶಿರಸಿ ಡಿವೈಎಸ್ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ‌ ಸಿಪಿಐ  ಸುರೇಶ ಯಳ್ಳೂರ, ಪಿಎಸ್ಐ  ಮಂಜುನಾಥ ಗೌಡರ ,  ಭೀಮಸಿಂಗ್ ಜಿ ಪಿ,ಎಸ್,ಐ, ಯಲ್ಲಾಪುರ ಪೊಲೀಸ್ ಠಾಣೆ ಹಾಗೂ ಎ.ಎಸ್.ಐ ಮಂಜುನಾಥ ಮನ್ನಂಗಿ ಮತ್ತು ಸಿಬ್ಬಂದಿಯವರಾದ ಸಿ.ಎಚ್ ಸಿ  ಮಹ್ಮದ ಶಫಿ, ಬಸವರಾಜ ಹಗರಿ, ಗಜಾನನ ನಾಯ್ಕ, ಕೃಷ್ಣಮೂರ್ತಿ ನಾಯ್ಕ ಹಾಗೂ ಸಿಪಿಸಿ-ಮುತ್ತಪ್ಪ ಬೋವಿ, ಚಿದಾನಂದ, ಮ.ಪಿ,ಸಿ ಶೋಭಾ ನಾಯ್ಕ ರವರು ಆರೋಪಿತರನ್ನು ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *