ಫಿನೋ ಪೇಮೆಂಟ್ಸ್ ಬ್ಯಾಂಕ್: ಉಳಿತಾಯ ಖಾತೆ ಪ್ರಾರಂಭ…!
1 min readಈಗ ಗ್ರಾಮೀಣ ಗ್ರಾಹಕರತ್ತ ಕೇಂದ್ರೀಕರಿಸಲಾಗಿರುವ ಡಿಜಿಟಲ್ ಉಳಿತಾಯ ಖಾತೆಯಾದ ಫಿನೋ ಪೇಮೆಂಟ್ಸ್ ಬ್ಯಾಂಕ್‌ನ ಆರಂಭ್‌ನೊಂದಿಗೆ ಸುಲಭವಾಗಿ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಿರಿ
ಹುಬ್ಬಳ್ಳಿ: ಸ್ವಲ್ಪ ಸಮಯದವರೆಗೆ ಎಟಿಎಂ ಕಾರ್ಡ್ ಎಂದರೆ ಬ್ಯಾಂಕಿಂಗ್ ಎಂಬಂತೆ ಆಗಿತ್ತು. ಆದರೆ, ದೇಶದ ಒಳನಾಡಿನಲ್ಲಿ ಲಕ್ಷಾಂತರ ಮಂದಿ ಎಟಿಎಂ ಕಾರ್ಡ್ ಕಳೆದುಹೋಗುವ ಭಯದಿಂದ ಅಥವಾ ಪಿನ್ ಮರೆತುಹೋಗುವ ಭಯದಿಂದ ಅದನ್ನು ಬಳಸದೆ ಸುಮ್ಮನಿದ್ದಾರೆ. ಆದರೂ, ಅವರಿಗೆ ಡಿಜಿಟಲ್ ಬ್ಯಾಂಕಿಂಗ್‌ನ ಪ್ರಯೋಜನಗಳನ್ನು ನಿರಾಕರಿಸಲಾಗುವುದಿಲ್ಲ.
ಗ್ರಾಹಕರ ಅನುಕೂಲಕ್ಕಾಗಿ ತನ್ನ ಉತ್ಪನ್ನದ ಆವಿಷ್ಕಾರವನ್ನು ಮುಂದುವರೆಸುತ್ತಾ, ಫಿನೋ ಪೇಮೆಂಟ್ಸ್ ಬ್ಯಾಂಕ್ ಇಂದು ಆಧಾರ್ ದೃಢೀಕರಣ ಆಧಾರಿತ ಡಿಜಿಟಲ್ ಉಳಿತಾಯ ಖಾತೆಯಾದ ಆರಂಭ್ ಉಳಿತಾಯ ಖಾತೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತು.
ಆರಂಭ ಚಂದಾದಾರಿಕೆ ಆಧಾರಿತ ಶೂನ್ಯ ಬ್ಯಾಲೆನ್ಸ್ ಖಾತೆಯಾಗಿದ್ದು ಇದು ಕನಿಷ್ಟ ಖಾತೆಯ ಬ್ಯಾಲೆನ್ಸ್ (MAB) ಅವಶ್ಯಕತೆ ಮತ್ತು ಡೆಬಿಟ್ ಕಾರ್ಡ್‌ನ ಅಗತ್ಯವನ್ನು ನಿವಾರಿಸುತ್ತದೆ, ಹೀಗಾಗಿಗ ಇದು ಗ್ರಾಹಕರ ಬ್ಯಾಂಕಿಂಗ್ ಅನುಭವವನ್ನು ಹೆಚ್ಚಿಸುತ್ತದೆ.
ಆರಂಭ್ ಖಾತೆಯನ್ನು ತೆರೆಯಲು ಗ್ರಾಹಕರು ಮಾಡಬೇಕಾಗಿರುವುದು ಇಷ್ಟೇ, ಹತ್ತಿರದ ಫಿನೊ ಶಾಖೆ ಅಥವಾ ಫಿನೊ ಅಧಿಕೃತ ವ್ಯಾಪಾರಿಯ ಬಳಿಗೆ ಭೇಟಿ ನೀಡಿ ತನ್ನ ಆಧಾರ್ ಕಾರ್ಡ್‌ನೊಂದಿಗೆ ಖಾತೆ ತೆರೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಗ್ರಾಹಕರು ಆಧಾರ್ ಆಧಾರಿತ ದೃಢೀಕರಣ ವಿಧಾನದ ಮೂಲಕ ಮಾತ್ರ ಆರಂಭ್ ಖಾತೆಯನ್ನು ತೆರೆಯಬಹುದು ಮತ್ತು ಖಾತೆ ತೆರೆಯುವ ಸಮಯದಲ್ಲಿಯೇ ಆಧಾರ್ ಸೀಡಿಂಗ್ ಅನ್ನು ಆಯ್ಕೆ ಮಾಡಬಹುದು. ಆರಂಭಕ್ಕೆ ಖಾತೆ ತೆರೆಯಲು ನಾಮಮಾತ್ರ ವಾರ್ಷಿಕ ನಿರ್ವಹಣೆ ಶುಲ್ಕ ರೂ. 99.
ಫಿನೋ ಪೇಮೆಂಟ್ಸ್ ಬ್ಯಾಂಕ್‌ನ ಹಿರಿಯ ವಿಭಾಗದ ಮುಖ್ಯಸ್ಥರಾದ (ಪಶ್ಚಿಮ ಮತ್ತು ಕೇಂದ್ರ) ಹಿಮಾಂಶು ಮಿಶ್ರಾ ಅವರು ಆರಂಭ್ ಬಿಡುಗಡೆಯನ್ನು ಪ್ರಕಟಿಸಿ, “ವೃದ್ಧಾಪ್ಯ ಪಿಂಚಣಿ, ಎಂಜಿಎನ್‌ಆರ್‌ಇಜಿಎ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ವಿವಿಧ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಗಳಲ್ಲಿ ಕೆಲಸ ಮಾಡುವ ಫಲಾನುಭವಿಗಳಿಗೆ ನಾವು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತೇವೆ. ಯಾವಾಗಲೂ ನಮ್ಮ ಗ್ರಾಹಕರಿಗೆ ಬ್ಯಾಂಕಿಂಗ್ ಅನ್ನು ಅನುಕೂಲಕರ ಮತ್ತು ಸರಳಗೊಳಿಸುವುದು ನಮ್ಮ ಉದ್ದೇಶವಾಗಿದೆ. ಹೊಸ ಉಳಿತಾಯ ಖಾತೆಯೊಂದಿಗೆ ಗ್ರಾಹಕರು ಡೆಬಿಟ್ ಕಾರ್ಡ್ ಮತ್ತು ಕನಿಷ್ಠ ಬ್ಯಾಲೆನ್ಸ್ ಬಗ್ಗೆ ಚಿಂತಿಸದೆ ತೊಡಕು ಮುಕ್ತ ಬ್ಯಾಂಕಿಂಗ್‌ನಲ್ಲಿ ತೊಡಗಿಸಿಕೊಳ್ಳಬಹುದು. AePS ನ ಅನುಕೂಲವು ನೆಲೆಗೊಳ್ಳುತ್ತಿದ್ದಂತೆ, ಗ್ರಾಮೀಣ ಕರ್ನಾಟಕದಲ್ಲಿ ಬ್ಯಾಂಕಿಂಗ್ ಅನ್ನು ಹೆಚ್ಚಿನ ಸ್ವೀಕರಿಸುವುದನ್ನು ಮತ್ತು ಅಳವಡಿಕೆಯನ್ನು ನಾವು ನಿರೀಕ್ಷಿಸುತ್ತೇವೆ” ಎನ್ನುತ್ತಾರೆ.
ಗ್ರಾಮೀಣ ಗ್ರಾಹಕರಿಗಾಗಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯ (AePS) ಅನುಕೂಲದಿಂದಾದಗಿ ಅದು ವಹಿವಾಟಿನ ಆದ್ಯತೆಯ ವಿಧಾನವಾಗಿ ಹೊರಹೊಮ್ಮಿದೆ.
ಆಧಾರ್ ದೃಢೀಕರಣ ಮತ್ತು ಓಟಿಪಿ ಸಂಯೋಜನೆಯೊಂದಿಗೆ ಗ್ರಾಹಕರು ಯಾವುದೇ ಫಿನೋ ಶಾಖೆ, ವ್ಯಾಪಾರಿ ಪಾಯಿಂಟ್ ಮತ್ತು ಫಿನೋ ಅಲ್ಲದ ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸಬಹುದು. ಅಲ್ಲದೆ, ಅವರು ಯಾವುದೇ ಶುಲ್ಕವಿಲ್ಲದೆ ಮಾಸಿಕ ರೂ. 25000 ವರೆಗೆ ಠೇವಣಿ ಇಡಬಹುದು ಮತ್ತು ಒಂದು ತಿಂಗಳಲ್ಲಿ ಫಿನೋ ಅಲ್ಲದ ಪಾಯಿಂಟ್‌ಗಳಲ್ಲಿ ಎರಡು ಉಚಿತ ನಗದು ಹಿಂಪಡೆಯುವ ವಹಿವಾಟುಗಳನ್ನು ಆನಂದಿಸಬಹುದು. ಇದಲ್ಲದೆ, ದಿನದ ಅಂತ್ಯದ ಬ್ಯಾಲೆನ್ಸ್ ರೂ. 2 ಲಕ್ಷಗಳನ್ನು ಮೀರಿದರೆ, ಪೂರ್ವಾನುಮತಿಯೊಂದಿಗೆ ಗ್ರಾಹಕರು ಸ್ವೀಪ್ ಖಾತೆ ಸೌಲಭ್ಯವನ್ನು ಪಡೆಯಬಹುದು.
ವ್ಯಾಪಾರಿಗಳು, ಫಿನೋ ಬ್ಯಾಂಕಿಂಗ್ ಪಾಯಿಂಟ್‌ಗಳು, ಕಿರಾಣಿ ಅಂಗಡಿಗಳು, ಮೆಡಿಕಲ್ ಸ್ಟೋರ್‌ಗಳು, ಡೈರಿ ಔಟ್‌ಲೆಟ್‌ಗಳು, ಮೊಬೈಲ್ ರಿಪೇರಿ ಅಂಗಡಿಗಳು ಮುಂತಾದ ನೆರೆಹೊರೆಯ ಅಂಗಡಿಗಳು ಯಾವಾಗಲೂ ತೆರೆದಿರುತ್ತವೆ ಮತ್ತು ಲಭ್ಯವಿರುತ್ತವೆ. ಬಹು ಮುಖ್ಯವಾಗಿ, ವ್ಯಾಪಾರಿಗಳು ಸ್ಥಳೀಯ ಜನರಿಗೆ ಪರಿಚಿತರಾಗಿರುತ್ತಾರೆ ಮತ್ತು ಸ್ನೇಹಪರರಾಗಿದ್ದು ಇದು ಗ್ರಾಹಕರ ವಿಶ್ವಾಸಕ್ಕೆ ಕಾರಣವಾಗುತ್ತದೆ.
ಗ್ರಾಮೀಣ ಪ್ರದೇಶದ ಜನರಿಗೆ ಫಿನೋ ಮರ್ಚೆಂಟ್ ಪಾಯಿಂಟ್‌ಗಳು ಉತ್ತಮ ಸೌಕರ್ಯ ಮತ್ತು ಅನುಕೂಲತೆಯನ್ನು ನೀಡುತ್ತವೆ. ಈ ಮೂಲಕ ಹೊಸ ಬ್ಯಾಂಕ್ ಖಾತೆಯನ್ನು ತೆರೆಯಬಹುದು, ತ್ವರಿತ ಡೆಬಿಟ್ ಕಾರ್ಡ್ ಪಡೆಯಬಹುದು, ಠೇವಣಿ, ಹಿಂಪಡೆಯುವಿಕೆ, ರವಾನೆ, ಎಇಪಿಎಸ್, ಮೈಕ್ರೋ ಎಟಿಎಂ ವಹಿವಾಟುಗಳನ್ನು ಮಾಡಬಹುದು ಮತ್ತು ವಿಮೆ, ಚಿನ್ನದ ಸಾಲ ಸೋರ್ಸಿಂಗ್‌ನಂತಹ ಮೂರನೇ ವ್ಯಕ್ತಿಯ ಕೊಡುಗೆಗಳನ್ನು ಪ್ರವೇಶಿಸಬಹುದು.
ಗ್ರಾಹಕರು ವಿದ್ಯುತ್, ಬ್ರಾಡ್‌ಬ್ಯಾಂಡ್, ಫೋನ್‌ನಂತಹ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಬಹುದು ಮತ್ತು ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್‌ಗಳಿಗೂ ಪಾವತಿಸಬಹುದು.