ಇನ್ಸಪೆಕ್ಟರ್ ಪ್ರಭು ಸೂರೀನ್ ವಜಾಗಾಗಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ..!
1 min readಧಾರವಾಡ: ಮಾಹಿತಿ ನೀಡಿದ ವ್ಯಕ್ತಿಯನ್ನೇ ಆರೋಪಿ ಮಾಡಿ ಪೊಲೀಸ್ ಇನ್ಸಪೆಕ್ಟರ್ ಮನಬಂದಂತೆ ಥಳಿಸಿದ್ದಾರೆಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಕಲಘಟಗಿ ಠಾಣೆ ಇನ್ಸಪೆಕ್ಟರ್ ಡೇವಿಡ್ ಚೆನ್ನಪ್ಪಾ ದೂಪದ ಎಂಬ ಮಾಹಿತಿದಾರರನ್ನೇ ಮನಬಂದಂತೆ ಥಳಿಸಿದ್ದಾರೆ. ಠಾಣೆಯೊಳಗೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆಂದು ದೂರಿದ ಪ್ರತಿಭಟನಾ ನಿರತರು, ತಕ್ಷಣವೇ ಇನ್ಸಪೆಕ್ಟರ್ ಪ್ರಭು ಸೂರೀನ್ ಅವರನ್ನ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.
ಹಸರಂಬಿ ಅರಣ್ಯ ವ್ಯಾಪ್ತಿಯಲ್ಲಿ ಇಬ್ಬರು ಕಂಟ್ರಿ ಪಿಸ್ತೂಲ್ ಇರುವ ಬಗ್ಗೆ ಪೊಲೀಸರಿಗೆ ಡೇವಿಡ್ ದೂಪದ ಮಾಹಿತಿ ನೀಡಿದ್ದರು. ಆದರೆ, ಆತನನ್ನೇ ಆರೋಪಿ ಮಾಡಿ, ‘ನೀನೇ ನಾಡ ಬಂದೂಕ ತಯಾರು ಮಾಡುವ ಸಾಮಗ್ರಿಗಳನ್ನ ತಂದು ಕೊಟ್ಟಿರುವೆನೆಂದು ಒಪ್ಪಿಕೋ’ ಎಂದು ಇನ್ಸಪೆಕ್ಟರ್ ಥಳಿಸಿದ್ದಾರೆಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ಲಕ್ಷ್ಮಣ ದೊಡ್ಡಮನಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿ, ಅನ್ಯಾಯ ಮಾಡಿರುವ ಇನ್ಸಪೆಕ್ಟರ್ ಪ್ರಭು ಸೂರೀನ್ ಅವರನ್ನ ಕೆಲಸದಿಂದ ವಜಾ ಮಾಡಲೇಬೇಕೆಂದು ಆಗ್ರಹಿಸಿದರು.