ಹುಬ್ಬಳ್ಳಿಯ ಮೂರು ಠಾಣೆ- ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ: ಇಲ್ಲಿ ಹೀಗೆ ಆಗೋದು
ಹುಬ್ಬಳ್ಳಿ: ರಾಜ್ಯ ಸರಕಾರ 81 ಇನ್ಸಪೆಕ್ಟರಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿಯ ಮೂರು ಠಾಣೆಯಲ್ಲಿ ಬದಲಾವಣೆ ಆಗುತ್ತಿವೆಯಾದರೂ ಇಬ್ಬರು ಇನ್ಸ್ ಪೆಕ್ಟರಗಳು ಹುಬ್ಬಳ್ಳಿಯಲ್ಲೇ ಠಾಣೆಯನ್ನ ಬದಲಾವಣೆ ಮಾಡಿಸಿಕೊಂಡಿದ್ದಾರೆ. ಧಾರವಾಡ ಗ್ರಾಮೀಣದಲ್ಲಿ ಶಿವಾನಂದ ಕಮತಗಿ ನಗರಕ್ಕೆ ಬಂದಿದ್ದಾರೆ.

ಹುಬ್ಬಳ್ಳಿ ಉತ್ತರ ಸಂಚಾರಿ ಠಾಣೆಯಲ್ಲಿದ್ದ ರತನಕುಮಾರ ಜಿರಗ್ಯಾಳ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಕಸಬಾಪೇಟೆ ಠಾಣೆಯಲ್ಲಿದ್ದ ಶ್ಯಾಮರಾಜ ಸಜ್ಜನರು ಹುಬ್ಬಳ್ಳಿ-ಧಾರವಾಡ ಸಿಸಿಬಿಗೆ ಬಂದಿದ್ದಾರೆ. ಉತ್ತರ ಸಂಚಾರಿ ಠಾಣೆಗೆ ಕಿತ್ತೂರು ಸಿಪಿಐಯಾಗಿದ್ದ ಶ್ರೀಕಾಂತ ತೋಟಗಿ ವರ್ಗಾವಣೆಗೊಂಡಿದ್ದಾರೆ.

ಇನ್ನುಳಿದಂತೆ ಹಳೇಹುಬ್ಬಳ್ಳಿ ಠಾಣೆಯಲ್ಲಿದ್ದ ಮಾರುತಿ ಗುಳ್ಳಾರಿಯವರನ್ನ ರಾಜ್ಯ ಗುಪ್ತವಾರ್ತಗೆ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಲೋಕಾಯುಕ್ತ ಆದೇಶದಲ್ಲಿದ್ದ ಶಿವಪ್ಪ ಕಮತಗಿ ಅವರು ಹಳೇಹುಬ್ಬಳ್ಳಿಗೆ ಬಂದಿದ್ದಾರೆ. ಇವರು ಧಾರವಾಡ ಗ್ರಾಮೀಣ ಠಾಣೆಯಲ್ಲೂ ಕರ್ತವ್ಯ ನಿರ್ವಹಿಸಿದ್ದರು.