ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಬಸಾಪುರ ವರ್ಗಾವಣೆ….

ಬೆಂಗಳೂರು: ರಾಜ್ಯ ಸರ್ಕಾರ ಮೂವತ್ತು ಇನ್ಸಪೆಕ್ಟರ್ ಗಳನ್ನ ವರ್ಗಾವಣೆ ಮಾಡಿಆದೇಶ ಹೊರಡಿಸಿದ್ದು, ಅದರಲ್ಲಿ ಧಾರವಾಡ ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಬಸಾಪೂರ ಕೂಡಾ ವರ್ಗಾವಣೆ ಮಾಡಲಾಗಿದೆ.

ಕೊಪ್ಪಳ ಜಿಲ್ಲೆಯ ಡಿಎಸ್ ಬಿ ವಿಭಾಗದಲ್ಲಿ ಇನ್ಸಪೆಕ್ಟರ್ ಆಗಿದ್ದ ಬಾಳನಗೌಡ ಮಾನಶೆಟ್ಟರ ಅವರನ್ನ ಧಾರವಾಡ ವಿದ್ಯಾಗಿರಿ ಠಾಣೆಗೆ ವರ್ಗಾಯಿಸಲಾಗಿದೆ.

ವಿದ್ಯಾಗಿರಿ ಠಾಣೆಯಿಂದ ಹುಬ್ಬಳ್ಳಿ ಧಾರವಾಡ ಸಿಸಿಬಿ ವಿಭಾಗಕ್ಕೆ ಬಸಾಪುರ ಅವರ ವರ್ಗಾವಣೆಯಾಗಿದೆ. ಪ್ರಭು ಗಂಗೇನಹಳ್ಳಿಯವರನ್ನ ದಾಂಡೇಲಿ ವೃತ್ತಕ್ಕೆ ವರ್ಗಾವಣೆ ಆಗಿದೆ.

ಮುಳಗುಂದ ಪೊಲೀಸ್ ಠಾಣೆಯಿಂದ ರಾಮದುರ್ಗ ವೃತ್ತಕ್ಕೆ ಅಶೋಕ ಸದಲಗಿಯವರನ್ನ ವರ್ಗಾವಣೆ ಮಾಡಲಾಗಿದೆ.