ಇನ್ಸಪೆಕ್ಟರ್ ಪ್ರಭು ಸೂರಿನ್: ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಯೂನಿಫಾರ್ಮ್ ಹಾಕಿಕೊಂಡು ಹೀಗೆ ನಡೆದುಕೊಳ್ಳಬೇಕಾ..!
1 min readಮಾಜಿ ಮುಖ್ಯಮಂತ್ರಿ ಹಾಲಿ ಸಚಿವ ಜಗದೀಶ ಶೆಟ್ಟರ, ಇನ್ಸಪೆಕ್ಟರ್ ಪ್ರಭು ಸೂರಿನ್ ಗಾಳಿಪಟ ಹಾರಿಸುವುದನ್ನ ನೋಡಿ,
ಅವರ ಮುಖವನ್ನ ನೋಡುತ್ತಲೇ ಮುಂದೆ ಹೆಜ್ಜೆ ಹಾಕಿದ್ರು.. ಅದು ಜಗದೀಶ ಶೆಟ್ಟರ ಸ್ವಭಾವ
ಹುಬ್ಬಳ್ಳಿ: ಅವಳಿನಗರದ ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನ ಯಾವ ಥರದಲ್ಲಿ ನಿಭಾಯಿಸುತ್ತಾರೆ ಎಂಬುದು ಬರ್ತಾ ಬರ್ತಾ ಯಕ್ಷಪ್ರಶ್ನೆಯಾಗತೊಡಗಿದೆ. ಯೂನಿಫಾರ್ಮ್ ಹಾಕಿಕೊಂಡು ಪಿ ಕ್ಯಾಪ್ ಹಾಕಿಕೊಳ್ಳದೇ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ನಿಂತು ಗಾಳಿಪಟ ಹಾರಿಸುವುದು ಕೆಲವರಲ್ಲಿ ಮುಜುಗರ ಮೂಡಿಸಿದ ಪ್ರಕರಣ ಇಂದು ನಡೆದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಜೊತೆಗೂಡಿ, ಬಿಜೆಪಿ ಮುಖಂಡರ ಜಮೀನಿಗೆ ಊಟ ಮಾಡಲು ಬಂದಿದ್ದರು. ಆಗ ಅಲ್ಲಿಗೆ ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನ್ ಕೂಡಾ ಬಂದಿದ್ರು. ಉಸ್ತುವಾರಿ ಸಚಿವರ ಮುಂದೆ ಓರ್ವ ಅಧಿಕಾರಿ ಹೇಗಿರಬೇಕು ಎಂಬುದನ್ನ ಮಾತ್ರ ಮರೆತಂತೆ ನಡೆದುಕೊಂಡರೆಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು.
ಸಚಿವರನ್ನ ಊಟಕ್ಕೆ ಕರೆದ ಮಲ್ಲಿಕಾರ್ಜುನ ಹೊರಕೇರಿ ಅವರು, ಈ ಇನ್ಸಪೆಕ್ಟರ್ ಅವರನ್ನೂ ಕರೆದಿದ್ದರೇ ಯೂನಿಫಾರ್ಮ್ ಹಾಕಿಕೊಳ್ಳದೇ ಬಂದು ಊಟ ಮಾಡಿ, ಸಚಿವರೊಂದಿಗೆ ಗಾಳಿಪಟ ಹಾರಿಸಿ ಹೋಗಬಹುದಿತ್ತಲ್ಲವೇ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.
ಪ್ರಭು ಸೂರಿನ್ ಅವರು ಇನ್ಸಪೆಕ್ಟರ್ ಆಗಿ ಸೌಮ್ಯ ಸ್ವಭಾವದ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಹಾಗೇ ನಡೆದುಕೊಳ್ಳುವುದು ಎಷ್ಟು ಸೂಕ್ತ. ಜಗದೀಶ ಶೆಟ್ಟರ ಮಾಜಿ ಮುಖ್ಯಮಂತ್ರಿ ಕೂಡಾ, ಅಂತಹದರಲ್ಲಿ ಸರಕಾರದ ಶಿಸ್ತಿನ ಇಲಾಖೆಯಲ್ಲಿ ಹೀಗಾದ್ರೇ ಹೇಗೆ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.