“ಪೋನ್ ಫೇ” ಲಂಚ ‘ಪೇದೆ ಪ್ರದೀಪ್’ ಅಮಾನತ್ತು- ಹಿಂಗಿದೆ ಶಾಣ್ಯಾತನ…!!!

ಅಕ್ರಮವಾಗಿ ನಡೆಯುತ್ತಿದ್ಧ ದಂಧೆಗೆ ಸಾಥ್
ಕಲಬುರಗಿ: ಅಕ್ರಮ ಮರಳು ದಂಧೆಯಲ್ಲಿ ಭಾಗಿ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ ಅವರು ಪೊಲೀಸ್ ಪೇದೆಯನ್ನ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪೂರ ಪೋಲಿಸ್ ಠಾಣೆಯ ಪೇದೆ ಪ್ರದೀಪ್ ಅಮಾನತುಗೊಂಡಿದ್ದಾರೆ.
ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದಲ್ಲದೆ, ಪೋನ್ ಫೇ ಮೂಲಕ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡ ಆರೋಪದಡಿ ಕಲಬುರಗಿ SP ಅಕ್ಷಯ್ ಹಾಕೆ ಅಮಾನತ್ತು ಮಾಡಿದ್ದಾರೆ.