“PI ಕಾಲಿಮಿರ್ಚಿಯವರ” ಧರ್ಮಪತ್ನಿ “ಬಿಸ್ಮಿಲ್ಲಾ ಬೇಗಂ” ಅವರಿಗೆ ಪಿಎಚ್‌ಡಿ ಪ್ರದಾನ…

ಹುಬ್ಬಳ್ಳಿ: ಬೆಳಗಾವಿ ಪ್ರದೇಶದ ಮುಸ್ಲಿಂ ಸಮುದಾಯಗಳು, ಚಾರಿತ್ರಿಕ ಅಧ್ಯಯನ (ವಸಾಹತು ಕಾಲದಿಂದ ಕರ್ನಾಟಕ ಏಕೀಕರಣದವರೆಗೆ) ಎಂಬ ಪ್ರಬಂಧಕ್ಕೆ ಬಿಸ್ಮಿಲ್ಲಾಬೇಗಂ ಜೆ.ಕಾಲಿಮಿರ್ಚಿ ಅವರಿಗೆ ಡಾಕ್ಟರೇಟ್ (ಪಿಎಚ್‌ಡಿ) ಪದವಿಯನ್ನ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಪ್ರದಾನ ಮಾಡಿದರು.
ಮಹಾಪ್ರಬಂಧವನ್ನ ಡಾ.ಚಂದ್ರಶೇಖರ ತಬೋಜಿ ಅವರ ಮಾರ್ಗದರ್ಶನದಲ್ಲಿ ಬಿಸ್ಮಿಲ್ಲಾಬೇಗಂ ಅವರು ರಚನೆ ಮಾಡಿ ಮಂಡಿಸಿದ್ದರು.
ಹುಬ್ಬಳ್ಳಿ ಗೋಕುಲ ಠಾಣೆ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿಯವರ ಪತ್ನಿಯಾಗಿರುವ ಬಿಸ್ಮಿಲ್ಲಾಬೇಗಂ ಅವರ ಸಾಧನೆಯನ್ನ ಕುಟುಂಬ ವರ್ಗ ಹಾಗೂ ಹಿತೈಷಿಗಳು ಅಭಿನಂಧಿಸಿದ್ದಾರೆ.