ಇಂದಿನ ಪೆಟ್ರೋಲ್ ದರ ಹೆಚ್ಚಳಕ್ಕೆ ಹಿಂದಿನ ಸರಕಾರಗಳೇ ಹೊಣೆ: ಪ್ರಧಾನಿ ನರೇಂದ್ರ ಮೋದಿ…!
1 min readಚೆನೈ: ಪೆಟ್ರೋಲ್ ಪ್ರತಿ ಲೀಟರ್ ಬೆಲೆ 100 ರೂಪಾಯಿ ದಾಟಿದ್ದು, ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಇಂಧನ ಆಮದು ಅವಲಂಬನೆಯನ್ನ ಕಡಿಮೆ ಮಾಡುವ ಬಗ್ಗೆ ಹಿಂದಿನ ಸರಕಾರಗಳು ಗಮನ ಹರಿಸದೇ ಇರುವುದೇ ಇಂದು ಮಧ್ಯಮ ವರ್ಗದವರಿಗೆ ಹೊರೆಯಾಗಿದೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ ಸುಮ್ಮನಿದ್ದ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರು, ಇಂದು ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಚೆನೈನಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಹಿಂದಿನ ಸರಕಾರವನ್ನ ಹೊಣೆಯಾಗಿಸಿದ್ದಾರೆ.
ನಮ್ಮ ಹಿಂದಿನ ಸರಕಾರಗಳು ಇಂಧನಗಳ ಆಮದಿನ ಮೇಲೆ ಹೆಚ್ಚಾಗಿ ಅವಲಂಬಿತವಾಗಿದ್ದೆ, ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದೆ. ಇನ್ನೂ 2019-20 ನೇ ಸಾಲಿನಲ್ಲಿ ಶೇಕಡಾ 85ರಷ್ಟು ಇಂಧನವನ್ನ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಅಗತ್ಯ ಇಂಧನಗಳ ಬೆಲೆ ಹೆಚ್ಚಳ ನಿಜಕ್ಕೂ ತೀವ್ರ ಕಳವಳಕಾರಿಯಾಗಿದೆ ಎಂದು ಹೇಳಿದರು.
ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರು, ಬಡವರಿಗೆ ತೀವ್ರ ಹೊರೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಇಂಧನದ ಮೇಲೆ ನಾವು ಪ್ರಮಾಣದಲ್ಲಿ ಅವಲಂಬನೆ ಆಗಬೇಕಾ ಎಂದು ಪ್ರಶ್ನಿಸಿದ್ದಾರೆ. ಪೆಟ್ರೋಲ್ ದರ 100 ದಾಟಿದ ದೇಶದ ಮೊದಲ ರಾಜ್ಯ ರಾಜಸ್ಥಾನವಾಗಿದೆ. ಇನ್ನುಳಿದಂತೆ ದೇಶದ ಇತರ ರಾಜ್ಯಗಳಲ್ಲಿ ಸರಿಸುಮಾರು 92 ರೂಪಾಯಿ ಆಸುಪಾಸಿನಲ್ಲಿದೆ.