ಧಾರವಾಡ ಜಿಲ್ಲೆಯಲ್ಲಿ “PE” ಶಿಕ್ಷಕರಿಲ್ಲ ಪ್ರಶಸ್ತಿ: ಕೈವಾಡದ ಹಿಂದೆ ಮಠ…!!!
1 min readಧಾರವಾಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯವಸ್ಥೆ ಅಧೋಗತಿಯತ್ತ ಹೊರಟಿದ್ದು, ಈ ಬಾರಿ ಪ್ರಶಸ್ತಿಯಲ್ಲಿ ಹಲವು ಗೊಂದಲಗಳು ಸೃಷ್ಠಿಯಾಗಿವೆ. ಮೂವರು ದೈಹಿಕ ಶಿಕ್ಷಣ ಶಿಕ್ಷಕರ ಹೆಸರುಗಳಿದ್ದರೂ, ಒಬ್ಬೇ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪ್ರಶಸ್ತಿ ನೀಡದೇ ಅನ್ಯಾಯ ಮಾಡಲಾಗಿದೆ. ಇದಕ್ಕೆ ಹಿರಿಯ ಅಧಿಕಾರಿಯ ಮನಸ್ಥಿತಿಯೇ ಕಾರಣ ಎನ್ನಲಾಗುತ್ತಿದೆ.
ನಾಳೆ ಸೆ.5 ಶಿಕ್ಷಕ ದಿನಾಚರಣೆ
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ
ಧಾರವಾಡ: ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 05 ರಂದು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ವಿದ್ಯಾಗಿರಿ ಜೆ.ಎಸ್.ಎಸ್ ಕಾಲೇಜು ಆವರಣದ ಸನ್ನಿಧಿ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ 2023-24 ನೇ ಸಾಲಿನ ಧಾರವಾಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವಿವರ ಹೀಗಿದೆ.
ಪ್ರಾಥಮಿಕ ವಿಭಾಗ- ಧಾರವಾಡ ಶಹರ ಹರಿಜನಕೇರಿಯ ವಿಜಯಾ ಲಾಡ ಎಲ್.ಪಿ.ಎಸ್, ಧಾರವಾಡ ಗ್ರಾಮೀಣ ದೂಪಾರ್ತಿವಾಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿವಾನಂದ ಎಸ್.ಕೆಲಗೇರಿ, ಹುಬ್ಬಳ್ಳಿ ಶಹರ ಹನುಮಂತನಗರ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಸರೋಜಾ ಪಾಟೀಲ್, ನವಲಗುಂದ ತಾಲೂಕಿನ ಎಲ್.ಪಿ,ಎಸ್ ನಂ.8 ಅಣ್ಣೆಗೇರಿಯ ವಿ.ಎಫ್. ಮಡಿವಾಳರ, ಕಲಘಟಗಿ ತಾಲೂಕಿನ ಕಲಕುಂಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಸಪ್ಪ ಯಲ್ಲಪ್ಪ ಹೊಸಮನಿ, ಹುಬ್ಬಳ್ಳಿ ಗ್ರಾಮೀಣ ವರೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಾರಾಯಣ ರಾಮಕೃಷ್ಣ ಆರೇರ, ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶೋಭಾ ವೀರಭದ್ರಪ್ಪ ಬಡಿಗೇರ
ಧಾರವಾಡ ಶಹರ ನವಲೂರ ಛಾವಣಿ ಹೆಚ್.ಪಿ.ಎಸ್ ಸಂತೋಷ ಕರಮಳ್ಳವರ, ಹುಬ್ಬಳ್ಳಿ ಶಹರ ಬಿಡನಾಳದ ಕರ್ನಾಟಕ ಪಬ್ಲಿಕ ಸ್ಕೂಲ್ ಎಸ್.ಎಸ್. ಕುಲಕರ್ಣಿ, ಹುಬ್ಬಳ್ಳಿ ಗ್ರಾಮೀಣ ಶೆರೇವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೋಭಾ ಜೋಸೆಫ್ ಕೊಂಗನವರ, ಕಲಘಟಗಿ ತಾಲೂಕಿನ ಲಿಂಗನಕೊಪ್ಪದ ಎಚ್.ಪಿ.ಎಸ್. ಕೆ.ಡಿ. ಹವಳಿ, ಕುಂದಗೋಳ ತಾಲೂಕಿನ ಹಿರೇನರ್ತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಹಾದೇವಪ್ಪ ಪಿ ಬೆಳಗಲಿ, ನವಲಗುಂದ ತಾಲೂಕಿನ ಹೆಚ್.ಪಿ.ಎಸ್ ಆರೇಕುರಹಟ್ಟಿಯ ವೆಂಕರಡ್ಡಿ ರಾಯರಡ್ಡಿ ವಾಸನದ, ಧಾರವಾಡ ಗ್ರಾಮೀಣ ತಡಕೋಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೋಭಾ ಶಿರಯಣ್ಣವರ
ಪ್ರೌಢಶಾಲಾ ವಿಭಾಗ-ಧಾರವಾಡ ಗ್ರಾಮೀಣ ಯರಿಕೊಪ್ಪ ಸರಕಾರಿ ಪ್ರೌಢ ಶಾಲೆ ಪ್ರವೀಣಾ ಎಸ್., ಧಾರವಾಡ ಶಹರದ ನವಲೂರ ಸರಕಾರಿ ಪ್ರೌಢ ಶಾಲೆಯ ಸುಜಾತಾ ಗಿರಾಗತಿ, ಹುಬ್ಬಳ್ಳಿ ಶಹರ ಆನಂದನಗರದ ಸರಕಾರಿ ಪ್ರೌಢ ಶಾಲೆಯ ಶಾಂತಾ ಉಮತಾರ, ಹುಬ್ಬಳ್ಳಿ ಗ್ರಾಮೀಣ ಕುರಡಿಕೇರಿ (RMSA) ಸರಕಾರಿ ಪ್ರೌಢ ಶಾಲೆಯ ರಾಜೇಶ್ರೀ ಬಿಡಿ, ಕಲಘಟಗಿ ತಾಲೂಕಿನ ಬಗಡಗೇರಿ ಸರ್ಕಾರಿ ಪ್ರೌಢ ಶಾಲೆಯ ಅಶೋಕ ಎಂ. ಶಿರಗುಪ್ಪಿ, ಕುಂದಗೋಳ ತಾಲೂಕಿನ ಕುಂಕೂರ (ಟಿ.ಜಿ.ಟಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಗದೀಶ ನಾಗಪ್ಪ ಸಲವಣ್ಣವರ ನವಲಗುಂದ ತಾಲೂಕಿನ ಜಿ.ಯು.ಎಚ್.ಎಸ್ ಅಣ್ಣಿಗೇರಿ ಬಿ.ಎಂ ಮುಜಾವರ ಧಾರವಾಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.