ದೈಹಿಕ ಶಿಕ್ಷಣ ಶಿಕ್ಷಕರ “ನೆಮ್ಮದಿ ಹಾಳು ಮಾಡಿದ” ಸರಕಾರದ ನೀತಿ…!!??
1 min readಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರ ನೆಮ್ಮದಿಯನ್ನ ಹಾಳು ಮಾಡುವ ಜೊತೆಗೆ ವಿದ್ಯಾರ್ಥಿಗಳಿಗೆ ಮೋಸ ಮಾಡಲು ಸರಕಾರವೇ ಮುಂದಾಗುತ್ತಿದೆ ಎಂಬ ದೂರುಗಳು ಕೇಳಿ ಬರಲಾರಂಭಿಸಿದೆ.
ಸರಕಾರದ ತೀರ್ಮಾನಗಳು ಸರಕಾರಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯವನ್ನ ಅಂಧಃಕಾರದತ್ತ ಕೊಂಡೊಯ್ಯುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ರಾಜ್ಯದ ಶಿಕ್ಷಕರ ನೆಮ್ಮದಿಯನ್ನ ಹಾಳು ಗೆಡುವಿದೆ.
ರಾಜ್ಯ ಸರಕಾರದ ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಣ ನೀಡಬೇಕೆಂಬ ನಿಯಮವಿದ್ದರೂ, ದೈಹಿಕ ಶಿಕ್ಷಣ ನೀಡುವ ಶಿಕ್ಷಕರನ್ನೇ ಹೆಚ್ಚುವರಿ ಮಾಡಿ, ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ತೀಲಾಂಜಲಿಯಿಡಲು ಮುಂದಾಗಿದೆ ಎಂದು ನೊಂದ ಪಾಲಕರು ಹೇಳುತ್ತಿದ್ದಾರೆ.
ಕಡ್ಡಾಯವಾಗಿ ದೈಹಿಕ ಶಿಕ್ಷಣವನ್ನ ಶಾಲೆಯಲ್ಲಿ ನೀಡಬೇಕೆಂದು ಬಡಾಯಿ ಕೊಚ್ಚಿಕೊಳ್ಳುವ ಸರಕಾರದವರು, ಅವರನ್ನೇ ಹೆಚ್ಚುವರಿ ಮಾಡಿ ಷಡ್ಯಂತ್ರಕ್ಕೆ ಮುಂದಾಗಿದೆ ಎನ್ನುವುದು ಬಹಿರಂಗಗೊಂಡಿದೆ.
ಎಸಿ ಹಚ್ಚಿಕೊಂಡು ಕಚೇರಿಯಲ್ಲಿ ಕೂತು ಆದೇಶ ಹೊರಡಿಸುವ ಅಧಿಕಾರಿಗಳು, ಸರಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನ ನಿರ್ಲಕ್ಷ್ಯ ವಹಿಸಲು ಮುಂದಾಗಿರುವುದು ಇಂದಿನ ವ್ಯವಸ್ಥೆಯನ್ನ ತೋರಿಸುತ್ತಿದೆ.
ಶಿಕ್ಷಣ ತಜ್ಞರು ಇಂತಹದಕ್ಕೆ ಅವಕಾಶ ಮಾಡಿಕೊಡದಂತೆ ಸರಕಾರದ ಮೇಲೆ ಒತ್ತಡ ಹೇರಬೇಕಿದೆ. ಇಲ್ಲದಿದ್ದರೇ ಮುಂದೊಂದು ದಿನ ದೈಹಿಕ ಶಿಕ್ಷಣ ಸರಕಾರಿ ಶಾಲೆಯಿಂದ ಮಾಯವಾದರೂ ಅಚ್ಚರಿಪಡಬೇಕಿಲ್ಲ.