ಸೈಟ್ ಖಾತೆ ಅಕ್ರಮ: “ಪಿಡಿಓ” ಅಮಾನತ್ತು ಮಾಡಿದ “ಸಿಇಓ”…
1 min readಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮ ನಿರಂತರ
ದೂರಿನ ಹಿನ್ನೆಲೆ ಕ್ರಮ ಜರುಗಿಸಿದ ಸಿಇಓ
ಚಿತ್ರದುರ್ಗ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸೈಟ್‌ಗಳ ಖಾತೆ ನಿರ್ಮಾಣ ಮಾಡಿ, ಇ ಸ್ವತ್ತು ಮಾಡಿಕೊಡುವ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಓ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಯರಬಳ್ಳಿ ಗ್ರಾಮ ಪಂಚಾಯತಿ PDO ಬಸವರಾಜ ಎಂಬುವವರನ್ನ ಅಮಾನತ್ತು ಮಾಡಿ, ಚಿತ್ರದುರ್ಗ ಜಿ.ಪಂ. ಸಿಇಓ ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.
ಸೈಟ್ ಗಳ ಖಾತೆ ಮತ್ತು ಇ-ಸ್ವತ್ತು ಅಕ್ರಮ ನಡೆದಿದ್ದು, ಇ- ಸ್ವತ್ತಿನ ವಿಚಾರದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ಅಮಾನತು ಮಾಡಲಾಗಿದೆ.