“10 ಸಾವಿರ” ಪಿಡಿಓ-ಡಾಟಾ ಆಪ್‌ರೇಟರ್ ಲೋಕಾಯುಕ್ತ ಬಲೆಗೆ…!
1 min readಲೋಕಾಯುಕ್ತ ಪೋಲಿಸರ ಭರ್ಜರಿ ಕಾರ್ಯಾಚರಣೆ
10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಖೆಡ್ಡಾಗೆ
ದಾವಣಗೆರೆ: ಇ ಸ್ವತ್ತು ಮಾಡಿಸಿಕೊಡಲು ಹತ್ತು ಸಾವಿರ ರೂಪಾಯಿಯ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಕಂಪ್ಯೂಟರ್ ಡಾಟಾ ಆಪ್‌ರೇಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೆಚ್ಚೇನಹಳ್ಳಿ ಗ್ರಾಪಂ ಪಿಡಿಓ ನಂದಿಲಿಂಗೇಶ್ ಸಾರಂಗಿಮಠ ಎಂಬುವವರೇ ದಾಳಿಯಲ್ಲಿ ಸಿಕ್ಕಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಚ್ಚೇನಹಳ್ಳಿ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸಿತ್ತಿದ್ದರು.
ಜಗಳೂರು ತಾಲೂಕು ವಂಚಾಯಿತ್ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಪಿಡಿಓ ನಂದಿಲಿಂಗೇಶ್, ಲಂಚ ವಸೂಲಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗ್ರಾಪಂ ಡಾಟಾ ಆಪರೇಟರ್ ಅಜ್ಜಯ್ಯ ಆರ್ ಸಹ ಖೆಡ್ಡಾಗೆ ಬಿದ್ದಿದ್ದಾರೆ.
ಇ ಸ್ವತ್ತು ಮಾಡಿಕೊಡಲು ಹತ್ತು ಸಾವಿರ ರೂಪಾಯಿಯನ್ನ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದ ಬಸನಗೌಡ ಎಂಬುವರಿಂದ ಪಿಡಿಓ ನಂದಿಲಿಂಗೇಶ್ ಸಾರಂಗಿಮಠ ಲಂಚ ಸ್ವೀಕಾರ ಮಾಡುತ್ತಿದ್ದರು.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ ಎಸ್ ಕೌಲಾಪುರೆ ನೇತೃದಲ್ಲಿ ದಾಳಿ ನಡೆದಿದ್ದು, ಇನ್ಸ್‌ಪೆಕರ್ ಗಳಾದ ಮಧುಸೂದನ್ ಹಾಗೂ ಎಚ್. ಎಸ್. ರಾಷ್ಟ್ರಪತಿ ಭಾಗಿಯಾಗಿದ್ದರು.