ಕುಮಾರಸ್ವಾಮಿ ದೂರು- “50K” ಲಂಚ- ಭ್ರಷ್ಟ ಪಿಡಿಓ ಲೋಕಾಯುಕ್ತ ಬಲೆಗೆ…
1 min readಮನೆಯ ಖಾತೆ ಬದಲಾವಣೆಗೆ ಹಣದ ಬೇಡಿಕೆ
ಹೊಂಚು ಹಾಕಿ ಬಲೆಗೆ ಹಾಕಿದ ನೊಂದಾತ
ಚಿತ್ರದುರ್ಗ: ಮನೆಯ ಖಾತೆ ಬದಲಾವಣೆಗೆ ಹಣದ ಬೇಡಿಕೆಯಿಟ್ಟಿದ್ದ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾ.ಪಂ ಪಿಡಿಓ ಶಿವಪ್ಪ ಹಾಗೂ ಸ್ಟಾಂಪ್ ವೆಂಡರ್ ಕಲ್ಲೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕುಮಾರಸ್ವಾಮಿ ಎಂಬುವರ ಮನೆ ಖಾತೆ ಬದಲಾವಣೆಗೆ ಭ್ರಷ್ಟ ಅಧಿಕಾರಿಗಳು 50ಸಾವಿರ ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದರು. ಇದೇ ಹಣ ಪಡೆಯುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ವಾಸುದೇವರಾವ, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.