Posts Slider

Karnataka Voice

Latest Kannada News

ಪಿಡಿಓಗಳ ಕೊರಳಪಟ್ಟಿ ಹಿಡಿಯಿರಿ ಎಂದಿದ್ದ ಸ್ಥಳದಲ್ಲೇ ಪಿಡಿಓಗಳ ರಾಜ್ಯ ಮಟ್ಟದ ಸಮಾವೇಶ..!

Spread the love

ಹುಬ್ಬಳ್ಳಿ: ಸಚಿವ ವಿ.ಸೋಮಣ್ಣ ಪಂಚಾಯತಿ ಪಿಡಿಓಗಳ ಕೊರಳಪಟ್ಟಿ ಹಿಡಿದು ಕೆಲಸವನ್ನ ತೆಗೆದುಕೊಳ್ಳಬೇಕೆಂದು ಹೇಳಿದ್ದ ಸ್ಥಳದಲ್ಲೇ ಪಿಡಿಓಗಳ ರಾಜ್ಯ ಮಟ್ಟದ ಸಮಾವೇಶವನ್ನ ಜನವೇರಿ 23ರಂದು ಹಮ್ಮಿಕೊಳ್ಳಲಾಗಿದೆ.

ಸಮಾವೇಶದ ಬಗ್ಗೆ ರಾಜ್ಯಾಧ್ಯಕ್ಷ ಹೇಳಿದ್ದಿಲ್ಲಿದೆ ನೋಡಿ..

ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರಿಗೆ ಸತ್ಕಾರ ಮಾಡುವ ಸಮಾರಂಭದಲ್ಲಿ ಸಚಿವ ವಿ.ಸೋಮಣ್ಣ, ಗ್ರಾಮಗಳಲ್ಲಿ ಕೆಲಸವಾಗಬೇಕು ಎಂದರೇ ಪಿಡಿಓಗಳ ಕೊರಳಪಟ್ಟಿ ಹಿಡಿರೀ ಎಂದು ಕರೆ ನೀಡಿದ್ದ ಜಾಗದಲ್ಲಿಯೇ ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಕ್ಷೇಮಾಭಿವೃದ್ಧಿ ಸಂಘದಿಂದ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿದ ರಾಜ್ಯಾಧ್ಯಕ್ಷ ಬೋರಯ್ಯ ಎಚ್, ಹಲವು ಬೇಡಿಕೆಗಳನ್ನಿಟ್ಟುಕೊಂಡು ಸಮಾವೇಶ ನಡೆಸುತ್ತಿದೆ. ಸಿಬ್ಬಂದಿಗಳ ವೇತನವೂ ಸೇರಿದಂತೆ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಸಮಾವೇಶದಲ್ಲಿ ಸಚಿವರನ್ನ ಕೇಳಿಕೊಳ್ಳಲಾಗುವುದೆಂದರು.

ಜನೇವರಿ 23ರಂದು ಹುಬ್ಬಳ್ಳಿಯ ಗೋಕುಲ ಗಾರ್ಡನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಚಿವ ಕೆ.ಎಸ್.ಈಶ್ವರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆಂದು ವಿವರಿಸಿದರು.


Spread the love

Leave a Reply

Your email address will not be published. Required fields are marked *