ಹಳ್ಳಿಕೇರಿ ಪಿಡಿಓ ವಿಜಯಲಕ್ಷ್ಮೀ ಬರದೂರ ಭ್ರಷ್ಟಾಚಾರ: ತನಿಖೆಗೆ ವಾರದ ಗಡುವು..!
1 min readಹುಬ್ಬಳ್ಳಿ: ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿ 14 ಮತ್ತು 15 ನೇ ಹಣಕಾಸಿನ ಹಣವನ್ನು ದುರುಪಯೋಗ ಮಾಡಿಕೊಂಡು, ಗ್ರಾಮಕ್ಕೆ ಅನ್ಯಾಯ ಮಾಡಿದ್ದು, ಅವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂದು ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಮುಖಂಡರು ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಮುಖಂಡರು, ವಿಜಯಲಕ್ಷ್ಮಿ ಬರದೂರ 2018ರಲ್ಲಿ ಹಳ್ಳಿಗೇರಿ ಗ್ರಾಮ ಪಂಚಾಯತಿಗೆ ಪಿಡಿಓಯಾಗಿ ನೇಮಕಗೊಂಡಿದ್ದು, 2018 ರಿಂದ 2021 ರವರೆಗೆ 14 ನೇ ಹಣಕಾಸು, 15 ನೇ ಹಣಕಾಸು, ಗ್ರಾಮ ಪಂಚಾಯತ ಕರ ವಸೂಲಿ, ನೀರು ಸರಬರಾಜು ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ಭಾರಿ ಅವ್ಯವಹಾರ ಮಾಡಿದ್ದಾರೆ. ಗ್ರಾಮಗಳ ಅಭಿವೃದ್ಧಿಗಾಗಿ ಬಂದಿದ್ದ ಹಣವನ್ನು ನುಂಗಿದ್ದು, ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಆದ್ದರಿಂದ ಪಿಡಿಓ ನಡೆಸಿರುವ ಅವ್ಯವಹಾರ ಕುರಿತು ಮುಂದಿನ ಒಂದು ವಾರದಲ್ಲಿ ತನಿಖಾ ಅಧಿಕಾರಿಗಳನ್ನು ನೇಮಿಸಿ ಅತಿ ಶೀಘ್ರದಲ್ಲೇ ತನಿಖೆ ಮಾಡಬೇಕು. ಇಲ್ಲದೇ ಹೋದಲ್ಲಿ ಗ್ರಾಮ ಪಂಚಾಯತಿಗೆ ಬೀಗ ಹಾಕಿ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಹಿರಿಯರಾದ ಯಲ್ಲಪ್ಪ ಮಲ್ಲಪ್ಪ ಇಮ್ಮಡಿ, ಮಹಾಂತೇಶ ಬೆಳಕೊಪ್ಪ, ಅಶೋಕ ದುರ್ಗದ, ಹುಚ್ಚಪ್ಪ ಕೊಳಲ, ಪ್ರಕಾಶ ಇಬ್ರಾಹಿಂಪುರ, ಮಹೇಶ ಬಿಳಿಯಲಿ, ಲೋಹಿತ ದ್ಯಾವನೂರ, ತೋಟಪ್ಪ ಸಣ್ಣಮರಿಯಪ್ಪ ಹೊಸಮನಿ ಉಪಸ್ಥಿತರಿದ್ದರು.