ನಾಪತ್ತೆಯಾಗಿದ್ದ ಪಿಡಿಓ ಕೆರೆಯಲ್ಲಿ ಶವವಾಗಿ ಪತ್ತೆ…

ಬೀದರ: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೋರ್ವರು ಕೆರೆಯಲ್ಲಿ ಶವವಾಗಿ ಪತ್ತೆಯಾದ ಆತಂಕಕಾರಿ ಘಟನೆ ನಡೆದಿದೆ.

ಬೀದರ ಜಿಲ್ಲೆಯ ಔರಾದ ತಾಲೂಕಿನ ಜಂಬಗಿ ಗ್ರಾ.ಪಂ ಪಿ.ಡಿ.ಓ ರಮೇಶ ಲೋಹಾರ ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಪಿಡಿಓ ರಮೇಶ ಇಂದು ತೆಲಂಗಾಣದಲ್ಲಿ ಶವವಾಗಿ ಪತ್ತೆಯಾಗಿದ್ದು, ಪಕ್ಕದಲ್ಲಿಯೇ ಎರಡು ಮೂಟೆಗಳು ಕೂಡಾ ಕಂಡು ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಬೀದರ ಜಿಲ್ಲೆಯ ಪಿಡಿಓಗಳು ಧರಣಿ ನಡೆಸಲು ಮುಂದಾಗಿದ್ದು, ಸಾವಿನ ಬಗ್ಗೆ ಸ್ಪಷ್ಟತೆಯನ್ನ ನೀಡಬೇಕೆಂದು ಆಗ್ರಹಿಸಿದ್ದಾರೆ.