ಮೆಂಬರ್ ಧಮಕಿ- ಕಚೇರಿಯಲ್ಲೇ ಕುಸಿದು ಬಿದ್ದಿದ್ದ ಪಿಡಿಓ ಸಾವು…!
1 min readಮೈಸೂರು: ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ವೇಳೆಯಲ್ಲಿ ಕುಸಿದು ಬಿದ್ದಿದ್ದ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ನಂಜನಗೂಡು ತಾಲೂಕಿನ ಸುತ್ತೂರಿನ ಪಿಡಿಓ ಸಾವಿತ್ರಮ್ಮ(44) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಕಳೆದ ತಿಂಗಳು ಸೆಪ್ಟೆಂಬರ್ 13ರಂದು ಸುತ್ತೂರು ಗ್ರಾಪಂ ಕಚೇರಿ ಒಳ ಭಾಗದಲ್ಲಿ ಕುಸಿದು ಬಿದ್ದಿದ್ದರು.
ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಂಜನಗೂಡಿನ ಹುಲ್ಲಹಳ್ಳಿ ಮತ್ತು ಸುತ್ತೂರು ಗ್ರಾಮಗಳಲ್ಲಿ 6 ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಸಾವಿತ್ರಮ್ಮ ಕಾರ್ಯನಿರ್ವಹಿಸುತ್ತಿದ್ದರು.
ಸುತ್ತೂರು ಗ್ರಾಪಂನಲ್ಲಿ ಜನಪ್ರತಿನಿಧಿಯೊಬ್ಬರು ಸಾವಿತ್ರಮ್ಮಗೆ ಧಮಕಿ ಹಾಕಿದಾಗ ಕುಸಿದು ಬಿದ್ದಿದ್ದಾರೆಂದು ಹೇಳಲಾಗಿದೆ.