ಧಾರವಾಡದಲ್ಲಿ PDO ಹೃದಯಾಘಾತದಿಂದ ಸಾವು
![](https://karnatakavoice.com/wp-content/uploads/2021/02/IMG_20210125_113159.jpg)
ಧಾರವಾಡ: ತಾಲೂಕಿನ ಪುಡಕಲಕಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೃದಯಾಘಾತದಿಂದ ಅಕಾಲಿಕವಾಗಿ ಸಾವನ್ನಪ್ಪಿದ ಘಟನೆ ಧಾರವಾಡದ ಮಣಿಕಂಠನಗರದಲ್ಲಿ ನಡೆದಿದೆ.
ಮೂಲತಃ ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಸಂಗಪ್ಪ ಕರಿಕಟ್ಟಿ ಮೃತರಾದ ಪಿಡಿಓ ಆಗಿದ್ದು, ಪುಡಕಲಕಟ್ಟಿ ಗ್ರಾಮದಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಮಾರಡಗಿಯ ಪಂಚಾಯತಿಯಲ್ಲಿ ಸೆಕ್ರಟರಿಯಾಗಿದ್ದ ಸಂಗಪ್ಪ ಕರಿಕಟ್ಟಿ, ಪ್ರಮೋಷನ್ ಪಡೆದು ಅಭಿವೃದ್ಧಿ ಅಧಿಕಾರಿಯಾಗಿದ್ದರು. ಮರೇವಾಡ ಪಂಚಾಯತಿಯಲ್ಲೂ ಕಾರ್ಯನಿರ್ವಹಣೆ ಮಾಡಿದ್ದರು.
ಸ್ವಬಾತಃ ಸೌಮ್ಯವಾಗಿದ್ದ ಸಂಗಪ್ಪ ಕರಿಕಟ್ಟಿ ಇಂದು ತಮ್ಮ ನಿವಾಸದಲ್ಲಿ ಎದೆನೋವು ಕಾಣಿಸಿಕೊಂಡು ಸಾವಿಗೀಡಾಗಿದ್ದಾರೆ.